HEALTH TIPS

ಸಕ್ಕರೆ ಕಾಯಿಲೆ ಇರುವವರು ಜೇನುತುಪ್ಪ ತಿಂದರೆ ಏನಾಗಬಹುದು ಎಂದು ಯೋಚಿಸಿದ್ದೀರಾ?

ಜೇನುತುಪ್ಪ (Honey) ನೈಸರ್ಗಿಕವಾಗಿ ಸಿಗುವ ಸಿಹಿ. ಅಷ್ಟೇ ಅಲ್ಲ… ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಯುರ್ವೇದ ಔಷಧವಾಗಿದೆ. ಏಕೆಂದರೆ ಇದರಲ್ಲಿ ಜೀವಸತ್ವ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಮಾತ್ರವಲ್ಲ ಉತ್ಕರ್ಷಣ ನಿರೋಧಕಗಳೂ ಇವೆ.

ಆದರೆ ಮಧುಮೇಹ (Diabetes) ಇರುವವರು ಸಕ್ಕರೆ ಬದಲಿಯಾಗಿ ಇದನ್ನು ಸೇವನೆ ಮಾಡಬಹುದೇ? ಇಷ್ಟೆಲ್ಲಾ ಪ್ರಯೋಜನಗಳಿರುವ ಜೇನುತುಪ್ಪ ಡಯಾಬಿಟಿಸ್ ಇರುವವರಿಗೂ ಒಳ್ಳೆಯದೇ? ಎನ್ನುವ ಪ್ರಶ್ನೆ ಹಲವರಿಗೆ ಮೂಡುವುದು ಸಹಜ. ಜೇನುತುಪ್ಪದಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಸತುವುಗಳಂತಹ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಉರಿಯೂತ ನಿವಾರಕ ಗುಣಗಳನ್ನು ಸಹ ಹೊಂದಿದೆ. ಮಧುಮೇಹ ರೋಗಿಗಳು ಇಷ್ಟೊಂದು ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿರುವ ಜೇನುತುಪ್ಪವನ್ನು ಸೇವಿಸಿದಾಗ ಏನಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ವೈದ್ಯರು ನೀಡಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು ಸಕ್ಕರೆ (Sugar) ಬದಲಿಯಾಗಿ ಜೇನುತುಪ್ಪ ಸೇವನೆ ಮಾಡುವುದು ಒಳ್ಳೆಯದೋ? ಅಲ್ಲವೋ ಎಂಬುದಕ್ಕೆ ಉತ್ತರ ಇಲ್ಲಿದೆ.

ಸಕ್ಕರೆ ಬದಲಿಯಾಗಿ ಜೇನುತುಪ್ಪ ಬಳಸಬಹುದೇ?

ವೈದ್ಯರು ಹೇಳುವ ಪ್ರಕಾರ, ಮಧುಮೇಹ ಇರುವವರು ಯಾವುದೇ ಕಾರಣಕ್ಕೂ ಸಕ್ಕರೆಯ ಬದಲಿಯಾಗಿ ಜೇನುತುಪ್ಪ ಸೇವನೆ ಮಾಡಬಾರದು. ಏಕೆಂದರೆ ಇದು ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಲ್ಲ . ಜೇನುತುಪ್ಪವು ಸಕ್ಕರೆಗಿಂತ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು, ಕ್ಯಾಲೋರಿಗಳು ಮತ್ತು ಸಿಹಿಯನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಸಕ್ಕರೆಗೆ ಬದಲಿಯಾಗಿ ಬಳಸುವುದು ಉತ್ತಮವಲ್ಲ. ಆದರೆ ಜೇನುತುಪ್ಪ ತಿನ್ನುವ ಮನಸ್ಸಾದರೆ ಅದನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬಹುದು. ಜೇನುತುಪ್ಪದಲ್ಲಿ ಹೆಚ್ಚಿನ ಕ್ಯಾಲೋರಿ ಇದ್ದು ಇದು ತೂಕ ಹೆಚ್ಚಾಗುವುದಕ್ಕೆ ಮುಖ್ಯ ಕಾರಣವಾಗುತ್ತದೆ. ಹಾಗಾಗಿ ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ಜೇನುತುಪ್ಪವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.

ಮಧುಮೇಹಿಗಳಿಗೆ ಜೇನುತುಪ್ಪ ಒಳ್ಳೆಯದಲ್ಲ ಎನ್ನುವುದಕ್ಕೆ ಕಾರಣವೇನು?

ಜೇನುತುಪ್ಪವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದರೂ ಕೂಡ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಒಂದು ಚಮಚ ಜೇನುತುಪ್ಪದಲ್ಲಿ 17 ಗ್ರಾಂ ಕಾರ್ಬೋಹೈಡ್ರೇಟ್‌ಗಳಿವೆ. ಜೇನುತುಪ್ಪವನ್ನು ಇತರ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಕ್ರಮೇಣ ಹೆಚ್ಚಾಗುತ್ತದೆ. ಡಬ್ಲ್ಯೂಎಚ್ ಓ ಪ್ರಕಾರ, ಒಂದು ಟೀ ಚಮಚ ಜೇನುತುಪ್ಪವು ಸುಮಾರು 64 ಕ್ಯಾಲೋರಿ, 17 ಗ್ರಾಂ ಸಕ್ಕರೆ, 17 ಗ್ರಾಂ ಕಾರ್ಬೋಹೈಡ್ರೇಟ್‌, 0.06 ಗ್ರಾಂ ಪ್ರೋಟೀನ್ ಮತ್ತು 0.04 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಜೇನುತುಪ್ಪವು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಅವುಗಳ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ. ಆರೋಗ್ಯವಂತ ವ್ಯಕ್ತಿಗಳಿಗೆ, ಜೇನುತುಪ್ಪವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಆದರೆ ಮಧುಮೇಹ ರೋಗಿಗಳು ಜೇನುತುಪ್ಪವನ್ನು ತಪ್ಪಿಸಬೇಕು. ಇದು ಸಕ್ಕರೆಯಂತೆಯೇ ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ.

ನಿಮ್ಮ ದಿನಚರಿ ಹೀಗಿರಲಿ;

ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವ ಆಹಾರ ಮತ್ತು ಸಕ್ಕರೆ ಪಾನೀಯಗಳಿಂದ ದೂರವಿರಬೇಕು. ಮಾತ್ರವಲ್ಲ ಪ್ರತಿದಿನ ವ್ಯಾಯಾಮ ಮಾಡಬೇಕು. ಜೊತೆಗೆ ಸಮಯಕ್ಕೆ ಸರಿಯಾಗಿ ಮಲಗಬೇಕು. ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ಇದೆಲ್ಲದರ ಜೊತೆಗೆ ಪ್ರತಿದಿನ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries