ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಮಹಾಸಭೆ ಇತ್ತೀಚೆಗೆ ಪೆರಡಾಲ ನವಜೀವನ ಶಾಲೆಯಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದ ಬಳಿಕ ನಡೆದ ಪ್ರತಿನಿಧಿ ಸಮಾವೇಶದಲ್ಲಿ ಉಪಜಿಲ್ಲಾ ಘಟಕಾಧ್ಯಕ್ಷ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನವಪ್ರಸಾದ ಕೆ. ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರಾಜೇಶ್ ಎಸ್.ಲೆಕ್ಕಪತ್ರ ಮಂಡಿಸಿದರು. ಅಧ್ಯಾಪಕ ಸಂಘದ ಪ್ರಾಂತ್ಯ ಅಧ್ಯಕ್ಷ ಸುಕೇಶ್, ಪ್ರಾಂತ್ಯ ಕೋಶಾಧಿಕಾರಿ ಶರತ್ ಕುಮಾರ್ ಎಂ., ಉಪಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಉಪಸ್ಥಿತರಿದ್ದರು. ಸದಸ್ಯರಿಂದ ಸಂಘಟನಾತ್ಮಕ ಚರ್ಚೆ ನಡೆಯಿತು. ಈ ಸಂದರ್ಭ ಕುಂಬಳೆ ಉಪ ಜಿಲ್ಲಾ ಘಟಕದ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಶ್ರೀಹರ್ಷ ಪೇರಾಲ್, ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಅಗಲ್ಪಾಡಿ, ಖಜಾಂಜಿಯಾಗಿ ರಾಜೇಶ್ ಪೆರಡಾಲ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಉಪಜಿಲ್ಲಾ ಜೊತೆಕಾರ್ಯದರ್ಶಿ ರಿಷಾದ್ ಪಿ.ಎಂ.ಸ್ವಾಗತಿಸಿ, ಈಶ್ವರ ಪೇರಾಲು ವಂದಿಸಿದರು. ಕಮಲಾಕ್ಷ ನಾಯಕ್ ನಿರೂಪಿಸಿದರು.


