ಕಾಸರರಗೋಡು: ಎಡನೀರು ಶೀ ಸಚ್ಚಿದಾನಂದಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ಸಮಾರಂಭದ ಅಂಗವಾಗಿ ಭಕ್ತಿ ಭಾವ ಸಂಗಮ ಕಾರ್ಯಕ್ರಮ ಆ. 1ರಂದು ಸಂಜೆ 6ಕ್ಕೆ ಶ್ರೀ ಮಠದ ಸಭಾಂಗಣದಲ್ಲಿ ಜರುಗಲಿದೆ. ಸಂಜೆ 7.30ಕ್ಕೆ ಮಂಗಳೂರು ಕೊಟ್ಟಾರದ ಭರತಾಂಜಲಿ ತಂಡದಿಂದ ಪರತೀ ಸ್ವಾಮೀಜಿ ಅವರ ಐದನೇ ಚಾತುರ್ಮಾಸ್ಯ ಸಮಾರಂಭದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗ್ರಿತಿಮಾ ಶ್ರೀಧರ್ ಬಳಗದಿಂದ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಶೈಲಿಯ 'ನೃತ್ಯ ಸಿಂಧೂರ' ಕಾರ್ಯಕ್ರಮ ಜರುಗಲಿದೆ.
2ರಂದು ಸಂಜೆ 6ಕ್ಕೆ ಉಷಾ ಈಶ್ವರಭಟ್ ಹಾಗೂ ಶಿವರಂಜಿನಿ ಭಟ್ ಬಳಗದವರಿಂದ ಶಾಸ್ತ್ರೀಯ ಸಂಗೀತ, 7,30ಕ್ಕೆ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿಯಿಂದ ನೃತ್ಯಾಂಜಲಿ, 3ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾಗಿರುವ ಸಜ್ನಾ ನಿಶಾದ್, ದಿಲ್ರುಬಾ ನಿಶಾದ್ ಹಾಗೂ ನಿಶಾದ್ ಸುಲ್ತಾನ್ ಕುಟುಂಬದ ಬಳಗದವರಿಂದ'ಭಕ್ತಿ ಗಾನ ಸುಧಾ'ನಡೆಯುವುದು. 4ರಂದು ಸಂಜೆ 6ಕ್ಕೆ ಕಯ್ಯಾರು ಪೊನ್ನೆತ್ತೋಡು ಮಹಿಳಾ ಯಕ್ಷಗಾನ ಸಂಘದಿಂದ ತುಳುನಾಡ ಬಲಿಯೇಂದ್ರ ಯಕ್ಷಗಾನ ತಾಳಮದ್ದಳೆ ನಡೆಯುವುದು. ರಾತ್ರಿ 8ರಿಂದ ಬಾಯಾರು ಶ್ರೀಪಂಚಲಿಂಗೇಸ್ವರ ಮಕ್ಕಳ ಯಕ್ಷಗಾನ ಕಲಾವೃಂದದಿಂದ ನರಕಾಸುರ ಮೋಕ್ಷ ಯಕ್ಷಗಾನ ಬಲಾಟ ನಡೆಯುವುದು.




