ಕುಂಬಳೆ: ಕುಂಬಳೆ ರೈಲ್ವೆ ನಿಲ್ದಾಣ ಸನಿಹ ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಯನ್ನು ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದ್ದ ಆರೋಪಿ, ಸಕಲೇಶಪುರ ನಿವಾಸಿ, ಕುಂಬಳೆ ಆರಿಕ್ಕಾಡಿಯ ಕಡವತ್ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ ಶುಹೈಬ್(26)ಎಂಬಾತನ ವಿರುದ್ಧ ಸಮಾನವಾದ ಮತ್ತೊಂದು ಕೇಸು ದಾಖಲಾಗಿದೆ. ಮಂಜೇಶ್ವರ ಕಾಲೇಜೊಂದರ ವಿದ್ಯಾರ್ಥಿನಿ 19ರ ಹರೆಯದ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ಜೂನ್ 5ರಂದು ಕುಂಬಳೆ ರೈಲ್ವೆ ನಿಲ್ದಾಣ ಸನಿಹದ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಹದಿನೆಂಟರ ಹರೆಯದ ಯುವತಿಯನ್ನು ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಈತನನ್ನು ಬಂದಿಸಿದ್ದರು. ಹಾಡಹಗಲು ಯುವತಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಿರುಕುಳಕ್ಕೆ ಯತ್ನಿಸುತ್ತಿದ್ದಂತೆ ಯುವತಿ ಬೊಬ್ಬಿಟ್ಟಿದ್ದಾಳೆ. ತಕ್ಷಣ ಆಸುಪಾಸಿನವರು ಧಾವಿಸುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ನಂತರ ಪೇಟೆಯಲ್ಲಿ ಸುತ್ತಾಡುತ್ತಿದ್ದ ಈತನನ್ನು ಸಾರ್ವಜನಿಕರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಆರೋಪಿಯ ಕಿಡಿಗೇಡಿ ಕೃತ್ಯ ರೈಲ್ವೆ ನಿಲ್ದಾಣ ಸನಿಹದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುವ ಮಧ್ಯೆ ಮತ್ತೊಂದು ದೂರು ದಾಖಲಾಗಿದೆ.




