ಕುಂಬಳೆ: ಅನಧಿಕೃತ ಮರಳು ದಂಧೆಕೋರರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಆರೋಪದಲ್ಲಿ ಕುಂಬಳೆ ಠಾಣೆಯ ಪೆÇೀಲೀಸ್ ವಾಹನ ಚಾಲಕ ಸೇರಿದಂತೆ ಆರು ಮಂದಿ ಪೆÇೀಲೀಸ್ ಸಿಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಭಾರತ್ ರೆಡ್ಡಿ ನಿರ್ದೇಶನದ ಮೇರೆಗೆ ಅಮಾನತು ಮಾಡಲಾಗಿದೆ.
ಕುಂಬಳೆ ಠಾಣಾಧಿಕಾರಿ ನೀಡಿದ ವರದಿಯಂತೆ ಜಿಲ್ಲಾ ಪೆÇೀಲೀಸ್ ವರಿಷ್ಠರು ಈ ಕ್ರಮ ಕೈಗೊಂಡಿದ್ದಾರೆ. ಪೆÇೀಲೀಸ್ ವಾಹನ ಚಾಲಕ ಕೃಷ್ಣ ಪ್ರಸಾದ್, ಸಿಬಂದಿ ಪಿ. ಎಂ.ಅಬ್ದುಲ್ ಸಲಾಂ, ವಿನೋದ್ ಕುಮಾರ್, ಲಿನೀಷ್, ಕೆ. ಅನೂಪ್ ಹಾಗೂ ಮನು ಎಂಬಿವರು ಅಮಾನತುಗೊಂಡವರು.
ಕುಂಬಳೆ ಠಾಣಾ ಪೆÇೀಲೀಸರಿಗೆ ಸ್ಥಳೀಯ ಮರಳು ಮಾಫಿಯ ಜತೆ ಸಂಪರ್ಕ ಇರುವ ಬಗ್ಗೆ ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿಗೆ ಇತ್ತೀಚೆಗೆ ದೂರು ಲಭಿಸಿತ್ತು. ಅಲ್ಲದೇ ಇತ್ತೀಚೆಗೆ ಅನಧಿಕೃತ ಮರಳು ದಂಧೆ ವಿರುದ್ಧ ಧಾಳಿ ನಡೆಸಿ ಟಿಪ್ಪರ್ ಲಾರಿ ಚಾಲಕನನ್ನು ಕುಂಬಳೆ ಠಾಣೆ ಎಸ್. ಐ. ನೇತೃತ್ವ ದಲ್ಲಿ ಬಂಧಿಸಲಾಗಿತ್ತು. ಬಳಿಕ ಈತನ ಮೊಬೈಲ್ ಪರಿಶೀಲಿಸಿದಾಗ ಪೆÇೀಲೀಸರ ಜತೆಗಿನ ಸಂಪರ್ಕ, ಸಂಭಾಷಣೆ ಬಯಲಾಗಿತ್ತು. ಮರಳು ಸಾಗಾಟಗಾರರಿಗೆ ಠಾಣೆಯ ಪೆÇೀಲೀಸರ ಕಾರ್ಯಾಚರಣೆಯ ಬಗ್ಗೆ ಸುಳಿವನ್ನು ಮುಂಚಿತವಾಗಿ ಪೆÇೀಲೀಸರೇ ಒದಗಿಸುತ್ತಿದ್ದರೆಂದೂ, ಇದಕ್ಕೆ ಪ್ರತಿಫಲವಾಗಿ ಮರಳು ಮಾಫಿಯಾದವರಿಂದ ಲಂಚ ಪಡೆಯುತ್ತಿದ್ದರೆಂದೂ ಮಾಹಿತಿ ದೊರೆತಿತ್ತು.




