ಕಾಸರಗೋಡು: ಸಮಸ್ತದ ಮಾಜಿ ಕೇಂದ್ರ ಉಪಾಧ್ಯಕ್ಷ ಹಾಗೂ ಕೀಯೂರು-ಮಂಗಳೂರು ಜಮಾಅತ್ ಖಾಲಿ ಸಿ.ಎಂ.ಅಬ್ದುಲ್ಲಾ ಮೌಲವಿ ಅವರ ಸಾವಿಗೆ ಸಂಬಂಧಿಸಿ ಹಕೀಂ ಫೈಝಿ ಅವರು ಬಹಿರಂಗ ಪಡಿಸಿರುವ ವಿಚಾರಗಳು ಅತ್ಯಂತ ಗಂಭೀರ ಹಾಗೂ ಕಳವಳಕಾರಿಯಾದುದು ಎಂದು ಎಸ್.ಕೆ. ಎಸ್ಸೆಸೆಫ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,
ಸಾರ್ವಜನಿಕ ವೇದಿಕೆಯಲ್ಲಿ ಹಕೀಂ ಫೈಜಿ ನೀಡಿರುವ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಿ, ಹೆಚ್ಚಿನ ತನಿಖೆ ನಡೆಸಿ ಆರೋಪಿಗಳನ್ನು ವಿಚಾರಣೆಗೊಳಪಡಿಸಬೇಕು.
ಸಿಬಿಐ ತನಿಖಾ ತಂಡವು ಹಕೀಂ ಫೈಜಿ ಅವರನ್ನು ಈ ವಿಷಯದ ಬಗ್ಗೆ ವಿವರವಾಗಿ ಪ್ರಶ್ನಿಸಿ ಸತ್ಯವನ್ನು ಸಾಬೀತುಪಡಿಸಬೇಕು ಎಂದು ನಾಯಕರು ಒತ್ತಾಯಿಸಿದರು. ರಾಜ್ಯ ಉಪಾಧ್ಯಕ್ಷ ತಾಜುದ್ದೀನ್ ದಾರಿಮಿ ಪಡನ್ನ, ಕಾರ್ಯದರ್ಶಿಗಳಾದ ಸುಹೈರ್ ಅಸ್‍ಹರಿ ಪಳ್ಳಂಗೋಡ್, ಫಾರೂಕ್ ದಾರಿಮಿ ಕೊಲ್ಲಂಪಾಡಿ, ಜಿಲ್ಲಾಧ್ಯಕ್ಷ ಜುಬೈರ್ ದಾರಿಮಿ ಪಡನ್ನ, ಕಾರ್ಯದರ್ಶಿ ಇರ್ಷಾದ್ ಹುದವಿ ಬೆದಿರ, ಕೋಶಾಧಿಕಾರಿ ಸಯೀದ್ ಅಸಾದಿ ಪುಂಜಾವಿ, ಕಾರ್ಯ ಕಾರ್ಯದರ್ಶಿ ಸಿದ್ದೀಕ್ ಮಾಸ್ಟರ್ ಬೆಳಿಂಜ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.




