ಕಾಸರಗೋಡು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ದೂರುಪರಿಹಾರ ಅದಾಲತ್ ಕಾಸರಗೋಡು ನಗರಸಭೆಯ ಸಭಾಂಗಣದಲ್ಲಿ ಜರುಗಿತು. ರಾಜ್ಯ ಎಸ್‍ಸಿ-ಎಸ್‍ಟಿ ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‍ನಲ್ಲಿ 152ದುರುಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 137 ದೂರುಗಳ ವಿಲೇವಾರಿ ನಡೆಸಲಾಯಿತು.
ಆರನೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ 25 ನೇ ದೂರು ಪರಿಹಾರ ಅದಾಲತ್ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಎರಡನೇ ಅದಾಲತ್ ಕಸರಗೋಡಿನಲ್ಲಿ ಎರಡು ದಿವಸಗಳಲ್ಲಾಗಿ ನಡೆಸಲಾಗಿತ್ತು. ಹಕ್ಕು ಪತ್ರಕ್ಕೆ ಸಂಬಂಧಿಸಿದಂತೆ 76 ದೂರುಗಳನ್ನು ಪರಿಹರಿಸಲು ಆಯೋಗವು ಜಿಲ್ಲಾಧಿಕಾರಿ ಕಚೇರಿಗೆ ನಿರ್ದೇಶನ ನೀಡಿದೆ. ಆಯೋಗವು ಪರಿಗಣಿಸಿದ 152 ದೂರುಗಳಲ್ಲಿ 59 ದೂರುಗಳು ಕಂದಾಯ ಇಲಾಖೆ, ತಲಾ 14 ಪೆÇಲೀಸ್ ಇಲಾಖೆ ಹಾಗೂ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಮೂರು ದೂರುಗಳು ಕೆಎಸ್‍ಇಬಿಗೆ ಸಂಬಂಧಿಸಿದವುಗಳಾಗಿದ್ದರೆ, 37 ಸ್ಥಳೀಯಾಡಳಿತ ಇಲಾಖೆಗೆ ಮತ್ತು ತಲಾ ಎರಡು ಶಿಕ್ಷಣ, ನಾಗರಿಕ ಸರಬರಾಜು ಮತ್ತು ಬ್ಯಾಂಕ್ ಇಲಾಖೆಗಳಿಗೆ ಸಂಬಂಧಿಸಿದ್ದಾಗಿದೆ. ಜಿಲ್ಲೆಯಲ್ಲಿ ಮೊದಲ ದಿನ ನಡೆದ ಅದಾಲತ್‍ನಲ್ಲಿ 124 ದೂರುಗಳು ಲಭಿಸಿದ್ದು, ಇವುಗಳಲ್ಲಿ 98 ದೂರುಗಳನ್ನು ಪರಿಹರಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 7583 ದೂರುಗಳನ್ನು ಪರಿಹರಿಸಲಾಗಿದೆ ಮತ್ತು 6000 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಶೇಖರನ್ ಮಿನಿಯೋಡನ್ ತಿಳಿಸಿದ್ದಾರೆ.
ಆಯೋಗದ ಸದಸ್ಯರಾದ ವಕೀಲ ಸೇತು ನಾರಾಯಣನ್, ಟಿ.ಕೆ. ವಾಸು, ಆಯೋಗದ ಸಹಾಯಕ ವಿಭಾಗ ಅಧಿಕಾರಿ ವಿ. ಪ್ರಣವ್ ಮಾನಸ್, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ. ಅಖಿಲ್ ಉಪಸ್ಥಿತರಿದ್ದರು.





