ಪೆರ್ಲ: ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಕರ್ಹಾಡ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಕರ್ಹಾಡ ಮಹಿಳಾ ಸಮಾವೇಶ ಭಾನುವಾರ ಪೆರ್ಲ ಶ್ರೀ ಭಾರತೀ ಸದನದಲ್ಲಿ ಜರಗಿತು.
ಕರ್ಹಾಡ ಸಮಾಜ ಹಾಗೂ ಮಹಿಳೆಯರಿಗೆ ಸಂಬಂಧಪಟ್ಟ ವಿಚಾರ ವಿನಿಮಯ-ಕರ್ಹಾಡ ಆಸ್ಮಿತೆ, ಸಂಸ್ಕøತಿ ಹಾಗೂ ಆಚಾರಗಳ ಪ್ರಾತ್ಯಕ್ಷಿಕೆ ಈ ಸಂದರ್ಭ ನಡೆಯಿತು. ಮಹಿಳಾ ಆರೋಗ್ಯ ಮಾಹಿತಿ, ಕರ್ಹಾಡ ಸಮಾಜದ ಎಲೆ ಮರೆಯ ಕಾಯಿಯಂತಿದ್ದ ಸಾಧಕಿಯರಿಗೆ ಸನ್ಮಾನ, ಸಭಾ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿನ ಮನೋರಂಜನ ಆಟಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸುಧಾ ಎಸ್ ಭಟ್ ಕಶೆಕೋಡಿ, ನಳಿನಿ ಸೈಪಂಗಲ್ಲು, ಆರೋಗ್ಯ ಮಾಹಿತಿಯ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಭಾರದ್ವಾಜಾಶ್ರಮದ ರೋಹಿಣಿ ಭಾರದ್ವಾಜ್ ಸುಳ್ಯ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಡಾ. ಪ್ರಫುಲ್ಲ. ಜಿ. ಭಟ್ ಉಡುಪಿ, ಸುಧಾ ಭಟ್ ಮಂಗಳೂರು ಮಾತನಾಡಿದರು. ಕರ್ಹಾಡ ಮಹಿಳಾ ವೇದಿಕೆಯ ಅಧ್ಯಕ್ಷೆ ವಿದ್ಯಾ ಎಡಮಲೆ ಅಧ್ಯಕ್ಷತೆ ವಹಿಸಿದ್ದರು. ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘ(ರಿ) ಅಗಲ್ಪಾಡಿ, ಇದರ ಅಧ್ಯಕ್ಷ ರಮಾನಂದ ಎಡಮಲೆ ಉಪಸ್ಥಿತರಿದ್ದರು.




.jpg)
