ಯಾವಾಗಲೂ ಬದ್ದ ವೈರಿಗಳಾಗಿದ್ದ india china- ಭಾರತ ಮತ್ತು ಚೀನಾ ಈಗ ದ್ವೇಷ ಮರೆತು ಸ್ನೇಹಿತರಾಗುವ ಕಾಲ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕದ ಬಲೆಯನ್ನ ಎದುರಿಸಲು ಭಾರತ ಮತ್ತು ಚೀನಾ ಒಗ್ಗೂಡುವ ಲಕ್ಷಣ ಗೋಚರಿಸುತ್ತಿವೆ. ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಮುಖಾಮುಖಿಯಾಗುತ್ತಿರುವ ಉಭಯ ದೇಶದ ನಾಯಕರು, ಟ್ರಂಪ್ ಸುಂಕಾಸ್ತ್ರಕ್ಕೆ ಪ್ರತಿಯಾಗಿ ರಣತಂತ್ರ ಹೆಣೆಯುವ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಗೆ ಮೋದಿ
ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಗೆ ಆಗಮಿಸುವಂತೆ ಭಾರತದ ಪ್ರಧಾನಿ ಮೋದಿ ಅವರನ್ನು ಚೀನಾ ವಿದೇಶಾಂಗ ಸಚಿವಾಲಯ ಆತ್ಮೀಯವಾಗಿ ಆಹ್ವಾನಿಸಿದೆ. ನರೇಂದ್ರ ಮೋದಿ narendra modi ಹಾಗೂ ಕ್ಸಿ ಜಿನ್ ಪಿಂಗ್ Xi Jinping ಭೇಟಿ ಉಭಯ ದೇಶಗಳ ನಡುವೆ ಹೊಸ ಸಂಬಂಧಕ್ಕೆ ಮುನ್ನುಡಿಯಾಗಲಿದೆ. ಶೃಂಗಸಭೆ ಸಂಬಂಧಗಳ ನಡುವೆ ಒಗ್ಗಟ್ಟು ಬೆಸೆಯುವ ವೇದಿಕೆಯಾಗಲಿದೆ. ಅಭಿವೃದ್ಧಿ ಹಾದಿಯಲ್ಲಿ ಹೊಸ ಮಜಲಾಗಲಿದೆ ಎಂದು ಚೀನಾ ವಿದೇಶಾಂಗ ವಕ್ತಾರ ಗುವೊ ಜಿಯಾಕುನ್ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ - ಮೋದಿ - ಜಿನ್ ಪಿಂಗ್ ಭೇಟಿ
ಈ ಭೇಟಿಯಲ್ಲಿ ಅಮೆರಿಕ ಹೊರತಾದ ಮಾರುಕಟ್ಟೆ ಕಂಡುಕೊಳ್ಳುವ ಕುರಿತು ಕ್ಸಿ ಜಿನ್ ಪಿಂಗ್ ಜತೆ ಸಮಾಲೋಚಿಸುವ ಸಂಭವವಿದೆ. ಶೃಂಗಸಭೆ ನೇಪಥ್ಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ Vladimir Putin ಅವರನ್ನು ಮೋದಿ ಭೇಟಿಯಾಗುವ ಸಾಧ್ಯತೆಗಳಿವೆ. ಪುಟಿನ್- Xi Jinping ಜಿನ್ ಪಿಂಗ್- ಮೋದಿ ಭೇಟಿ, ಟ್ರಂಪ್ ಸುಂಕ ಬೆದರಿಕೆ ನಡುವೆ ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಚೀನಾ ಚೀನಾ ಭೇಟಿಯಾಗಿದೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆ ನಡೆಯಲಿದೆ. ಆತಿಥೇಯ ಚೀನಾ ಸೇರಿ ಭಾರತ, ರಷ್ಯಾ, ಪಾಕಿಸ್ತಾನ, ಬೆಲಾರಸ್, ತಜಕಿಸ್ತಾನ, ಕಿರ್ಗಿಸ್ತಾನ ಉಲ್ಲೇಕಿಸ್ತಾನ, ಕಜಕಸ್ತಾನ, ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.




