ಉಪ್ಪಳ: ಕೇರಳ ತುಳು ಅಕಾಡೆಮಿಯ ವತಿಯಿಂದ ಆ.10 ರಂದು ಭಾನುವಾರ ಪೈವಳಿಕೆಯಲ್ಲಿ ತುಳುನಾಡಿನ ಮಹತ್ವದ ಆಟಿ ತಿಂಗಳ ಪ್ರಯುಕ್ತ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರವನ್ನು ಯಶಸ್ವಿಗೊಳಿಸುವ ಸಲುವಾಗಿ ಸೋಮವಾರ ಸಂಜೆ ಪೈವಳಿಕೆ ಪಂಚಾಯತಿ ಕುಟುಂಬಶ್ರೀ ಸಭಾಂಗಣದಲ್ಲಿ ಸ್ವಾಗತ ಸಮಿತಿ ರೂಪಿಕರಣ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಕೆ., ಉಪಾದ್ಯಕ್ಷರುಗಳಾಗಿ ವಸಂತ ಮಾಸ್ತರ್, ಸುನೀತಾ ವಾಲ್ಟಿ ಡಿಸೋಜಾ, ಸುಜಾತಾ ಬಿ.ರೈ, ಹುಸೈನ್ ಮಾಸ್ತರ್, ಕಾರ್ಯದರ್ಶಿಯಾಗಿ ಅಜಿತ್ ಎಂ.ಸಿ., ಜೊತೆ ಕಾರ್ಯದರ್ಶಿಗಳಾಗಿ ಚಂದ್ರ ನಾಯ್ಕ್ ಎಂ., ಅಶೋಕ್ ಭಂಡಾರಿ, ಚನಿಯ ಕೊಮ್ಮಂಗಳ, ಪುಷ್ಪ ಜಯರಾಮ್, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿಯ ಕಾರ್ಯದರ್ಶಿಯಾಗಿ ದಾಸಪ್ಪ ಮಾಸ್ತರ್, ಸದಸ್ಯರಾಗಿ ಕೃಷ್ಣವೇಣಿ ಟೀಚರ್, ರೇಖಾ, ಶ್ರೀಕುಮಾರಿ ಟೀಚರ್, ಸುಮಿತ್ರ, ಆಹಾರ ಸಮಿತಿಯ ಕಾರ್ಯದರ್ಶಿಯಾಗಿ ವರ್ಕಾಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ, ಸದಸ್ಯರಾಗಿ ಅಬ್ಬಾಸ್, ಇಸ್ಮಾಯಿಲ್, ಅಶ್ರಫ್ ಸೋಕೆ, ಶೀಲಾವತಿ, ರಫೀಸ್, ಹನೀಫ್ ಚಿಪ್ಪಾರ್ ಆಯ್ಕೆಯಾದರು. ಆಟಿದ ಕೂಟ ಕಾರ್ಯಕ್ರಮವು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂಧಿಗೆ ಆ. 10 ರಂದು ಪೈವಳಿಕೆಯ ಕುಲಾಲ ಭವನದಲ್ಲಿ ಜರಗಲಿದೆ.
ಸಭೆಯಲ್ಲಿ ಪೈವಳಿಕೆ ಗ್ರಾಮಪಂಚಾಯತಿ ಸದಸ್ಯರಾದ ಅಬ್ದುಲ್ ರಜಾಕ್ ಚಿಪ್ಪಾರ್, ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ, ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು. ಅಕಾಡೆಮಿ ಸದಸ್ಯ ಅಬ್ದುಲ್ಲ ಕೆ ಸ್ವಾಗತಿಸಿ, ಅಜಿತ್ ಎಂ.ಸಿ. ವಂದಿಸಿದರು.




.jpg)
.jpg)
