ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ)ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಕಾಸರಗೋಡು ಮೀಪುಗುರಿ ನಿವಾಸಿ 55 ವರ್ಷಗಳ ಕಾಲ ಛಾಯಾಗ್ರಹಣ ವೃತ್ತಿ ಜೀವನ ನಡೆಸಿದ ಹಿರಿಯ ಛಾಯಾಗ್ರಾಹಕ ಹಾಗೂ ಕಲಾವಿದ ಸುರೇಶ್ ಅವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು. ಯೂನಿಟ್ ಸದಸ್ಯ ಸುಬ್ರಹ್ಮಣ್ಯ ವಿಡಿಯೋನಿಕ್ಸ್ ಇವರು ಶಾಲು ಹೊದಿಸಿ ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕಾರ್ಯದರ್ಶಿ ವಿಶಾಖ್, ಕೋಶಾಧಿಕಾರಿ ಗಣೇಶ್ ರೈ ಉಪಸ್ಥಿತರಿದ್ದರು.


