ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ವಿವಿಧ ರೀತಿಯ ಪಾಪಾಸುಕಳ್ಳಿಗಳ ಓಯಸಿಸ್ ನಿರ್ಮಿಸಲಾಗಿದೆ. ವಿಶ್ವವಿದ್ಯಾಲಯದ ಕಾಸರಗೋಡು ಸಸ್ಯೋದ್ಯಾನ ಮತ್ತು ಸಂಶೋಧನಾ ಕೇಂದ್ರ (ಕೆಬಿಜಿಆರ್‍ಸಿ)ದ ವತಿಯಿಂದ ಮೂವತ್ತಕ್ಕೂ ಹೆಚ್ಚು ಪ್ರಬೇದಗಳ ಪಾಪಾಸುಕಳ್ಳಿಗಳನ್ನು ಅಳವಡಿಸಲಾಗಿದೆ. ಭಾರತ, ಮೆಕ್ಸಿಕೊ, ಸೌದಿ ಅರೇಬಿಯಾ ಮತ್ತು ಮಧ್ಯ ಆಫ್ರಿಕಾದ ದೇಶಗಳಲ್ಲಿ ಕಂಡುಬರುವ ಪ್ರಮುಖ ಪ್ರಭೇದ ಇವುಗಳಲ್ಲಿ ಒಳಗೊಮಡಿದೆ. ಕೇರಳದ ಹೊರತಾಗಿ, ಇವು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣದಂತಹ ರಾಜ್ಯಗಳಿಂದಲೂ ಪಾಪಾಸು ಕಳ್ಳಿಯನ್ನು ತರಿಸಲಾಘಿದೆ. ಇದು ವಿವಿಧ ಆಕಾರವನ್ನು ಹೊಂದಿದೆ ಮತ್ತು ಹೂಬಿಡುವ ಪಾಪಾಸುಕಳ್ಳಿಗಳೂ ಸಸ್ಯೋದ್ಯಾನದಲ್ಲಿದೆ.
ಮರುಭೂಮಿ ಸೇರಿದಂತೆ ಒಣ ಹವೆ ಹೊಂದಿದ ಪ್ರದೇಶಗಳಲ್ಲಿ ಪಾಪಾಸುಕಳ್ಳಿ ಕಂಡುಬರುತ್ತದೆ. ಅದೇ ರೀತಿಯ ಪರಿಸರವನ್ನು ಕ್ಯಾಂಪಸ್ ಆವರಣದಲ್ಲಿ ನಿರ್ಮಿಸಲಾಗಿದ್ದು, ಮಳೆ ಬೀಳದ ಸ್ಥಿತಿಯಲ್ಲಿ, ಇವುಗಳನ್ನು ಅಳವಡಿಸಿ, ಸಂರಕ್ಷಿಸಿಡಲಾಗಿದೆ. ಜೈವಿಕ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.
ಕ್ಯಾಂಪಸ್‍ನಲ್ಲಿ ಆರಂಭಿಸಲಾಗಿರುವ ¸ ಪಾಪಾಸುಕಳ್ಳಿ ಸಸ್ಯೋದ್ಯಾನವನ್ನು ವಿಶ್ವ ವಿದ್ಯಾಲಯ ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಉದ್ಘಾಟಿಸಿದರು. ಪ್ರಭಾರ ಕುಲಸಚಿವ ಡಾ. ಆರ್.ಜಯಪ್ರಕಾಶ್, ಸಸ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ಕೆ. ಅರುಣ್ ಕುಮಾರ್, ಕೆಬಿಜಿಆರ್‍ಸಿ ಜಂಟಿ ನಿರ್ದೇಶಕ ಡಾ. ಎಂ. ಜಾಸ್ಮಿನ್ ಶಾ, ಡಾ. ಪ್ರಮೋದ್ ಕೆ. ಕಂಡೋತ್, ಡಾ. ಜಿನ್ನಿ ಆಂಟನಿ, ಡಾ. ಅಜಯ್ ಕುಮಾರ್, ಮತ್ತು ಡಾ. ಚಿತ್ರಾ ಮಣಿಶ್ಶೇರಿ ಉಪಸ್ಥಿತರಿದ್ದರು.


