HEALTH TIPS

ನೌಕಾಪಡೆಯಿಂದ ಸಮುದ್ರ ರಕ್ಷಣೆ ಮಾತ್ರವಲ್ಲ, ಆರ್ಥಿಕ ಭದ್ರತೆಯ ಆಧಾರಸ್ತಂಭ: ರಾಜನಾಥ

ವಿಶಾಖಪಟ್ಟಣ : ಭಾರತೀಯ ನೌಕಪಡೆಯು ಕೇವಲ ಸಮುದ್ರ ಗಡಿಯನ್ನು ಕಾಯುವುದಿಲ್ಲ, ದೇಶದ ಆರ್ಥಿಕತೆಯ ಬೆನ್ನೆಲುಬು ಆದ ತೈಲ ಹಾಗೂ ನೈಸರ್ಗಿಕ ಅನಿಲದ ಆಮದು ರಪ್ತುಗಳಿಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. 

ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ 'ಆಪರೇಷನ್ ಸಿಂಧೂರ' ಯಶಸ್ವಿಯಾಗಿದೆ.

ಈ ದಾಳಿಯ ಮೂಲಕ ಭಯೋತ್ಪಾದಕರಿಗೆ ಪರಿಣಾಮಕಾರಿ ಮತ್ತು ನಿಖರವಾದ ಪ್ರತಿಕ್ರಿಯೆಯನ್ನು ನೀಡಿದ್ದೇವೆ ಎಂದು ಹೇಳಿದರು.

ನೌಕಾಪಡೆಯ ಪೂರ್ವ ಕಮಾಂಡ್‌ನಲ್ಲಿ ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದವಿರುವ ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿ ಯುದ್ಧ ನೌಕೆಗಳನ್ನು ನಿಯೋಜಿಸಲಾಗಿದೆ. ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದವಿರುವ ಯುದ್ಧ ನೌಕೆಗಳ ಕಾರ್ಯಾರಂಭವು ಭಾರತೀಯ ನೌಕಾಪಡೆಯ ಶಕ್ತಿ, ವ್ಯಾಪ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಭಾರತ ಎಂದಿಗೂ ವಿಸ್ತರಣಾವಾದ ನೀತಿಯನ್ನು ಅನುಸರಿಸುವುದಿಲ್ಲ. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ ಎಂದು ಹೇಳಿದರು.

ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿಗಳು ಆತ್ಮನಿರ್ಭರ ಭಾರತ ಯೋಜನೆಯಡಿ ನಿರ್ಮಾಣವಾದ ಯುದ್ದ ನೌಕೆಗಳಾಗಿವೆ. ಭಾರತೀಯ ಭದ್ರತೆಯಲ್ಲಿ ಈ ನೌಕೆಗಳು ಮೈಲುಗಲ್ಲು ಸಾಧಿಸಲಿವೆ ಎಂಬ ಆತ್ಮವಿಶ್ವಾಸವಿದೆ ಎಂದು ಸಿಂಗ್‌ ಹೇಳಿದರು.

ನೌಕಾಪಡೆಯು ಕರಾವಳಿ ತೀರಗಳನ್ನು ಕಾಯುವುದಷ್ಟೇ ಅಲ್ಲದೇ, ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries