ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಿರುವ ಎಲೆಕ್ಟ್ರಾನಿಕ್ ಮತಯಂತ್ರಗಳು ಬಳಕೆಗೆ ಸಿದ್ಧವಾಗಿದ್ದು, ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಮೊದಲ ಹಂತದ ಪರಿಶೀಲನೆ (ಎಫ್‍ಎಲ್‍ಸಿ) ಪೂರ್ಣಗೊಂಡಿದೆ.
ರಾಜ್ಯ ಚುನಾವಣಾ ಆಯೋಗದ ಅಧೀನದಲ್ಲಿ 137922 ಬ್ಯಾಲೆಟ್ ಯೂನಿಟ್‍ಗಳು ಮತ್ತು 50693 ನಿಯಂತ್ರಣ ಘಟಕಗಳನ್ನು ಹೊಂದಿದ್ದು, ಕಾಸರಗೋಡು ಜಿಲ್ಲೆಯಲ್ಲಿ 5928 ಬ್ಯಾಲೆಟ್ ಯೂನಿಟ್‍ಗಳು ಮತ್ತು 2087 ನಿಯಂತ್ರಣ ಘಟಕಗಳಿವೆ. ಮತಯಂತ್ರಗಳ ತಯಾರಕರಾಗಿರುವ ಎಲೆಕ್ಟ್ರಾನಿಕ್ ಕಾಪೆರ್Çರೇಷನ್ ಆಫ್ ಇಂಡಿಯಾ ಲಿಮಿಟೆಡ್, ಇದನ್ನು ಪರಿಶೀಲಿಸಿ ಪ್ರಮಾಣೀಕರಿಸಿದ್ದು, ಇವುಗಳನ್ನು ಆಯಾ ಜಿಲ್ಲೆಗಳಲ್ಲಿರುವ ಸ್ಟ್ರಾಂಗ್ ರೂಮ್‍ಗಳಲ್ಲಿ ದಾಸ್ತಾನಿರಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಕಾಪೆರ್Çರೇಷನ್ ಆಫ್ ಇಂಡಿಯಾ ಲಿಮಿಟೆಡ್‍ನ 29 ಎಂಜಿನಿಯರ್‍ಗಳ ನೇತೃತ್ವದಲ್ಲಿ ತರಬೇತಿ ಪಡೆದ ಒಂದು ಸಾವಿರದಷ್ಟು ಮಂದಿ ಅಧಿಕಾರಿಗಳು ಮತ ಯಂತ್ರಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದೆ. 14 ಜಿಲ್ಲೆಗಳಲ್ಲಿ 21 ಕೇಂದ್ರಗಳಲ್ಲಿ ಮತ ಯಂತ್ರಗಳ ಪರೀಕ್ಷೆಯನ್ನು ನಡೆಸಲಾಗಿದೆ.
ಜುಲೈ 25 ರಂದು ಆರಂಭಗೊಂಡ ತಪಾಸಣಾ ಕಾರ್ಯ ಒಂದು ತಿಂಗಳ ವರೆಗೆ ಮುಂದುವರಿದಿತ್ತು. ರಾಜ್ಯ ಚುನಾವಣಾ ಆಯೋಗದ ಇವಿಎಂ ಸಲಹೆಗಾರ ಎಲ್. ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಇವಿಎಂ ಟ್ರ್ಯಾಕ್ ಎಂಬ ಸಾಫ್ಟ್‍ವೇರ್ ಸಹಾಯದಿಂದ ಇವಿಎಂಗಳ ನಿಯೋಜನೆಯನ್ನು ಮಾಡಲಾಗುತ್ತಿದೆ. ತಪಾಸಣೆಗೊಳಪಡಿಸಲಾದ ಇವಿಎಂಗಳನ್ನು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಡಿಯಲ್ಲಿ ಸ್ಟ್ರಾಂಗ್‍ರೂಮ್‍ಗಳಲ್ಲಿ ದಾಸ್ತಾನಿರಿಸಲಾಗಿದೆ.




