ಮಧೂರು : ಮಧೂರು ಸನಿಹದ ಕುದ್ರೆಪ್ಪಾಡಿ ರಚನಾ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಕುದ್ರೆಪ್ಪಾಡಿ ಗ್ರಾಮೋತ್ಸವ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕುದ್ರೆಪ್ಪಾಡಿ ಬಯಲುಗದ್ದೆಯ ಕೆಸರಿನಲ್ಲಿ ಹಗ್ಗ ಜಗ್ಗಾಟ,ಮಡಕೆ ಒಡೆಯುವುದು, ಬೆಸರುಗದ್ದೆಯಲ್ಲಿ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಅಭಿನಂದನೆ ನಡೆಯಿತು. ಈ ಸಂದರ್ಭ ಮಧೂರು ಗ್ರಾಮ ಪಂಚಾಯತು ಸದಸ್ಯೆ,ಅಂಗನವಾಡಿ ಶಿಕ್ಷಕಿ ಶ್ರೀಮತಿ ಟೀಚರ್ ಅವರನ್ನು ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಶ್ರೀಮತಿ ಟೀಚರ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು.
ರಚನಾ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ಬಿನ ಅಧ್ಯಕ್ಷ ಅಜಿತ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲೋಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಕುದ್ರೆಪ್ಪಾಡಿ ಸುಬ್ರಹ್ಮಣ್ಯ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಸರ್ವೇಶ್ ಕುಮಾರ ಭಟ್, ಜಗದೀಶ ಹೆಬ್ಬಾರ್, ಪಿ.ಎಸ್ ಕೃಷ್ಣ ಭಟ್, ಶರತ್, ಸುನಿಲ್ ಕುದ್ರೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.





