ಮಂಜೇಶ್ವರ: ಪಾವೂರು ಪೆÇಯೈ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣವೇಷ ಸ್ಪರ್ಧೆ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮ ಜರುಗಿತು. ಕ್ಷೇತ್ರ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿಕೆದುಂಬಾಡಿ ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಸ್ಪರ್ಧೆಗಳು ನಡೆಯಿತು.
ಸಮರೋಪ ಸಮಾರಂಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಮುಟ್ಲ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿಶ್ರೀಧರ ಶೆಟ್ಟಿ ಪಾವೂರು ಗುತ್ತು, ವಿಶ್ವಂಬರ ನಾಯ್ಕ್ ಮಳಿಗುತ್ತು, ಬಾವಳಿ ಗುಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅಡ್ಕ, ಗೌರವ ಸಲಹೆಗಾರ ಶಂಕರ್ ನಾರಾಯಣ ಮರಿಕಾಪು, ತೀಯಾ ವೆಲ್ಫರ್ ಸಮಿತಿ ಕಾಸರಗೋಡು ಜಿಲ್ಲಾ ಘಟಲ ಅಧ್ಯಕ್ಷ ಗಣೇಶ್ ಪಾವೂರು, ಕ್ಷೇತ್ರ ಆಡಳಿತ ಸಮಿತಿ ಸದಸ್ಯರಾದ ತ್ಯಾಂಪಣ್ಣ ರೈ ಪಾವೂರು, ದಯಾನಂದ ಸಾಲಿಯನ್ ಕೊಪ್ಪಳ, ರವಿ ಮುಡಿಮಾರ್, ಅಶೋಕ್ ಪಾವೂರು, ಸದಾಶಿವ ಶೆಟ್ಟಿ ಬಾವಳಿಗುಳಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಭೋಜ ಮಾಸ್ಟರ್ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ ಕೋಡಿಮುಗೆರು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.





