ಪೆರ್ಲ: ಶಾಲಾ ಮಧ್ಯಾಹ್ನದೂಟ(ಪಿಎಂ ಪೋಷಣ್)ವಿತರಣೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸೋಶಿಯಲ್ ಆಡಿಟ್ 2023-34 ಕಾರ್ಯಕ್ರಮ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರುಗಿತು. ಶಾಲಾ ಮಧ್ಯಾಹ್ನದೂಟದ ಸೋಶಿಯಲ್ ಆಡಿಟ್‍ನ ಬಗ್ಗೆ 'ಕಿಲಾ'ತರಬೇತಿ ಸಂಸ್ಥೆಯ ಫೆಸಿಲಿಟೇಟರ್ ರಾಜಾರಾಮ ಸಿ ಅವರು ಪ್ರಾಸ್ತಾವವಿಕ ಮಾತುಗಳನ್ನಾಡಿ, ಸೋಶಿಯಲ್ ಆಡಿಟ್‍ನ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಸಮಾರಂಭ ಉದ್ಘಾಟಿಸಿದರು. ಪಂಚಾಯಿತಿ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಸ್ ಗಾಂಭೀರ್, ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಶ್ಮೀಪ್ರಿಯ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಉಪಾಧ್ಯಕ್ಷ ಉಮೇಶ್ ಕೆ. ಪೆರ್ಲ, ನಾಗರಿಕ ಪೂರೈಕೆ ಇಲಾಖೆಯ ಪೆರ್ಲ ಮಾವೇಲಿ ಕೇಂದ್ರದ ವೇಣು ದೇವಸ್ಯ ಉಪಸ್ಥಿತರಿದ್ದರು.
ಆಡಿಟ್ ತಂಡದ ಲೀಡರ್ ಸುಪ್ರಭಾ ಓಡಿಟ್ ವರದಿ ಮಂಡಿಸಿದರು. ಶಾಲಾ ಮುಖ್ಯ ಶಿಕ್ಷಕ ಎನ್.ಕೇಶವ ಪ್ರಕಾಶ್ ಸ್ವಾಗತಿಸಿದರು. ಕೃಷ್ಣಪ್ರಸಾದ್ ಬನಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಮತಾ ವಂದಿಸಿದರು.





