ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬಾಳೆ ಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಯೋಧಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಸಿಆರ್‍ಪಿಎಫ್ ಸಬ್ ಇನ್‍ಸ್ಪೆಕ್ಟರ್ ಅಪ್ಪಯ್ಯ ಮಣಿಯಾಣಿ ಜಿ.ಎ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಶಶಿಧರ್ ಕುಮಾರ್ ಪಿ ಅತಿಥಿಯಾಘಿ ಭಾಗವಹಿಸಿದ್ದರು. ಶಾಲಾ ಎಸ್‍ಎಸ್‍ಜಿ ಅಧ್ಯಕ್ಷ ಬಟ್ಯ ಮಾಸ್ಟರ್ ಅಭಿನಂದನಾ ಭಾಷಣ ಮಾಡಿದರು. ಎಸ್‍ಎಸ್‍ಜಿ ಉಪಾಧ್ಯಕ್ಷ ಮಾಲಿಂಗ ಕೆ, ಎಸ್ ಎಂ ಸಿ ಅಧ್ಯಕ್ಷ ನಾರಾಯಣ ನಾಯ್ಕ ಪಿ, ಎಂ ಪಿ ಟಿ ಎ ಅಧ್ಯಕ್ಷೆ ಪದ್ಮಾವತಿ ಉಪಸ್ಥಿತರಿದ್ದರು. ಈ ಸಂದರ್ಭ ಸೇನೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಪ್ಪಯ್ಯ ಮಣಿಯಾಣಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಪಿಟಿಎ ಅಧ್ಯಕ್ಷ ರಾಜೇಶ್ ಬಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಿ ಸ್ವಾಗತಿಸಿದರು. ಸಿ ಆರ್ ಸಿ ಕೋ ಆರ್ಡಿನೇಟರ್ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಹನಾ ಕೆ ವಂದಿಸಿದರು.





