ಕಾಸರಗೋಡು: ನಗರ ಸಭಾ ಕುಟುಂಬಶ್ರೀ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಎನ್‍ಯುಎಲ್‍ಎಂ) ಆಶ್ರಯದಲ್ಲಿ ಹೊಸ ಬಸ್ ನಿಲ್ದಾಣದ ಬಳಿ ಬೀದಿ ಬದಿ ವ್ಯಾಪಾರಿಗಳಿಗಾಗಿ ನಿರ್ಮಿಸಲಾದ ವ್ಯಾಪಾರಿ ಮಳಿಗೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ದಿನೇಶನ್ ಐಎಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಜಾಹಿರ್ ಆಸಿಫ್, ಆರ್.ರೀತಾ, ಖಾಲಿದ್ ಪಚ್ಚಕ್ಕಾಡ್, ಆರ್.ರಜನಿ, ಯೋಜನಾ ಸಮಿತಿಉಪಾಧ್ಯಕ್ಷ ಎ.ಅಬ್ದುಲ್ ರಹಮಾನ್, ನಗರಸಭೆ ಸದಸ್ಯರಾದ ಕೆ.ಜಿ.ಪವಿತ್ರ, ಪಿ.ರಮೇಶ್, ಎಂ.ಲಲಿತಾ, ಸಿದ್ದೀಕ್ ಚಕ್ಕರ, ವರಪ್ರಸಾದ್ ಕೋಟೆಕಣಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಾಯಕ ಸಂಯೋಜಕ ಡಿ.ಹರಿದಾಸ್, ಸಿಡಿಎಸ್ ಅಧ್ಯಕ್ಷೆ ಆಯೇಷಾ ಇಬ್ರಾಹಿಂ, ಕಾಸರಗೋಡು ನಗರಠಾಣೆ ಎಸ್‍ಎಚ್‍ಒ ಪಿ. ನಳಿನಾಕ್ಷನ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್, ಬೀದಿಬದಿ ವ್ಯಾಪಾರಿ ಸಮಿತಿ ಸದಸ್ಯ ಅಶ್ರಫ್ ಎಡನೀರ್, ವ್ಯಾಪಾರಿ ಸಂಘದ ಮುಖಂಡ ಟಿ. ಪಿ. ಇಲ್ಯಾಸ್, ವ್ಯಾಪಾರಿ ಸಮಿತಿಯ ನೇತಾರ ಮೋಹನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ನಗರ ಸಭೆಯ ಕಾರ್ಯದರ್ಶಿ ಡಿ.ವಿ. ಅಬ್ದುಲ್ ಜಲೀಲ್ ಸ್ವಾಗತಿಸಿದರು. ಎನ್‍ಎಲ್‍ಯು ನಗರ ಮಿಷನ್ ವ್ಯವಸ್ಥಾಪಕ ಬಿನೀಶ್ ಜಾಯ್ ವಂದಿಸಿದರು.




