ಕಾಸರಗೋಡು: ಜಿಲ್ಲೆಯ ಅತ್ಯುತ್ತಮ ನೇಯ್ಗೆ ಸಹಕಾರಿ ಸಂಘ ಪ್ರಶಸ್ತಿಯನ್ನು ಕಾಸರಗೋಡು ನೇಯ್ಗೆ ಸಹಕಾರಿ ಸಂಘ ಪಡೆದುಕೊಂಡಿದೆ. 2023-24ನೇ ಸಾಲಿನ ಪ್ರಶಸ್ತಿಗೆ ಸಂಘಟನೆ ಆಯ್ಕೆಯಾಗಿತ್ತು.
ನೇಯ್ಗೆ ಸಹಕಾರಿ ಸಂಘದ ಕಾರ್ಯದರ್ಶಿ ಅನಿತಾ ಅವರು 2023-24ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ನೇಯ್ಗೆ ಸಹಕಾರಿ ಸಂಘಕ್ಕಿರುವ ಪ್ರಶಸ್ತಿಯನ್ನು ತಿರುವನಂತಪುರಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಕೈಗಾರಿಕಾ ಸಚಿವ ಶ್ರೀ ಪಿ. ರಾಜೀವ್ ಅವರಿಂದ ಸ್ವೀಕರಿಸಿದರು. ಸಮಾರಂಭದಲ್ಲಿ ಸಂಘದ ನಿರ್ದೇಶಕಿ ಕುಮಾರಿ ಮಮತಾ ುಪಸ್ಥಿತರಿದ್ದರು.
:ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ನೇಯ್ಗೆ ಸಹಕಾರಿ ಸಂಘಕ್ಕಿರುವ ಪ್ರಶಸ್ತಿಯನ್ನು ಸಂಘದ ಕಾರ್ಯದರ್ಶಿ ಅನಿತಾ ಹಾಗೂ ನಿರ್ದೇಶಕಿ ಮಮತಾ ಸಚಿವರಿಂದ ಸ್ವೀಕರಿಸಿದರು.





