ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ದೇಗುಲ ತುಂಬಿಸುವ ಹಾಗೂ ನವಾನ್ನ ಕಾರ್ಯಕ್ರಮ ಶುಕ್ರವಾರ ಜರುಗಿತು. ಗದ್ದೆಯಿಂದ ಭತ್ತದ ತೆನೆ ತೆಗೆದು ದೇಗುಲದೊಳಗೆ ತಂದು ನಡೆಯಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ದೇಗುಲ ತುಂಬಿಸುವ ಕಾರ್ಯ ನೆರವೇರಿತು. ನಿರಂತರ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿದ್ದು, ದೇವಾಲಯದೊಳಗೆ ನೆರೆನೀರು ತುಂಬಿಕೊಂಡಿತ್ತು.
ಮೊಣಕಾಲಿನ ವರೆಗೂ ತುಂಬಿಕೊಂಡಿದ್ದ ನೀರಿನಲ್ಲಿ ಸಂಚರಿಸಿ ಅರ್ಚಕರು ಪೌರರೋಹಿತ್ಯ ಕಾರ್ಯ ನೆರವೇರಿಸಿದರು. ಭಕ್ತಾದಿಗಳೂ ನೀರಿನಲ್ಲೇ ಸಂಚರಿಸಿ ಶ್ರೀದೇವರ ದರ್ಶನ ಪಡೆದರು.






