ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ 'ಮಿನಿ ಇಂಡಿಯಾ' ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಕೇರಳದ ವಿದ್ಯಾರ್ಥಿಗಳೊಂದಿಗೆ ಉತ್ಸಾಹದಿಂದ ಕ್ಯಾಂಪಸ್‍ನಲ್ಲಿ ಅಪರಿಮಿತ ಸಂಭ್ರಮದೊಂದಿಗೆ ಪಾಲ್ಗೊಂಡರು. ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ. ವಿದ್ಯಾರ್ಥಿಗಳು ಓಣಂ ಹಾಡುಗಳನ್ನು ಹಾಡಿ, ಹೂವಿನ ರಂಗೋಲಿ ರಚಿಸಿದರು. ವಿದ್ಯಾರ್ಥಿಗಳ ತಂಡ ತಿರುವಾದಿರ ಮೂಲಕ ರಂಜನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಓಣಂ ಔತಣ ಕೂಟ ಆಯೋಜಿಸಲಾಯಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿದರು. ಪ್ರಭಾರ ಕುಲಸಚಿವ ಡಾ. ಆರ್. ಜಯಪ್ರಕಾಶ್, ವಿದ್ಯಾರ್ಥಿ ಕಲ್ಯಾಣ ಡೀನ್ ಪೆÇ್ರ. ರಾಜೇಂದ್ರ ಪಿಲಾಂಕಟ್ಟೆ, ಸಾಂಸ್ಕøತಿಕ ಅಧ್ಯಯನ ಶಾಲೆಯ ಡೀನ್ ಪೆÇ್ರ. ಸ್ವಪ್ನ ಎಸ್. ನಾಯರ್, ಸಾಂಸ್ಕೃತಿಕ ಸಂಯೋಜಕಿ ಡಾ. ಕೆ. ಶ್ರವಣಾ ಮೊದಲಾದವರು ಉಪಸ್ಥಿತರಿದ್ದರು. ಹೂವಿನ ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ, ಓಣಂ ಹಾಡುಗಳನ್ನು ಆಯೋಜಿಸಲಾಗಿತ್ತು. ಕಾಲೇಜು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಮಡಿದ್ದರು. ಕಾಲೇಜಿನ ವಿವಿಧ ಇಲಾಖೆಗಳ ನೇತೃತ್ವದಲ್ಲಿ ಓಣಂ ಆಯೋಜಿಸಲಾಗಿತ್ತು.





