ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2021ರಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಅಭ್ಯರ್ಥಿಗೆ ಲಂಚದ ಆಮಿಷ ಹಾಗೂ ಬೆದರಿಕೆಯೊಡ್ಡಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಎಂಬ ಬಿಜೆಪಿ ಮುಖಂಡ ಕೆ. ಸುರೇಂದ್ರನ್ ವಿರುದ್ಧದ ರಿವಿಷನ್ ಅರ್ಜಿಯನ್ನು ಕೇರಳ ಸರಕಾರ ಹಿಂಪಡೆದುಕೊಂಡಿದೆ. ಹೈಕೋರ್ಟಿಣ ಈ ತೀರ್ಪು ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದ್ದ ಬಿಜೆಪಿ ಮುಖಂಡ ಕೆ. ಸುರೇಂದ್ರನ್ ಹಾಗೂ ಕಾಸರಗೋಡಿನ ಇತರ ಐವರು ನೇತಾರರನ್ನು ನಿರಾಳರನ್ನಾಗಿಸಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರ ಅವರನ್ನು ಅಪಹರಿಸಿ ಕೊಂಡೊಯ್ದು ದಿಗ್ಭಂಧನಧಲ್ಲಿ ಇರಿಸಿ, ಬೆದರಿಕೆ ಮತ್ತು ಆಮಿಷವೊಡ್ಡಿ, ಲಂಚವಾಗಿ 2.5 ರಕ್ಷ ರೂ ಮತ್ತು ಮೊಬೈಲ್ ಫೆÇೀನು ನೀಡಿರುವ ಬಗ್ಗೆ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಕೇಸು ಕಾನೂನಾತ್ಮಕವಾಗಿ ಸಿಂಧುವಲ್ಲ ಹಾಗೂ ಇದೊಂದು ರಾಜಕೀಯ ಪ್ರೇರಿತ ಸುಳ್ಳು ಕೇಸು ಆಗಿರುವುದಾಗಿ ಕೆ. ಸುರೇಂದ್ರನ್ ಮತ್ತು ಬಿಜೆಪಿಯ ಐವರು ನಾಯಕರೂ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ, ಪೆÇೀಲೀಸ್ ತನಿಖಾ ವರದಿ ಆಧಾರದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ದೋಷಮುಕ್ತಿಗೊಳಿಸಿ ತೀರ್ಪು ನೀಡಿತ್ತು.
ಅಂದು ಮಂಜೇಶ್ವರ ವಿಧಾನಸಭಾ ಕ್ಷಷೇತ್ರದಲ್ಲಿ ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಸ್ಪರ್ಧಿಸಿದ್ದ ಸಿಪಿಎಂನ ವಿ. ವಿ. ರಮೇಶನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಪ್ರಸಕ್ತ ಕೇಸಿನಲ್ಲಿ ಕೆ. ಸುರೇಂದ್ರನ್ ಸಹಿತ ಐವರ ದೋಷಮುಕ್ತಗೊಂಡ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ಕಾರ ತೀರ್ಪಿನ ಮರು ಪರಿಶೀಲನೆಗಾಗಿ ಹೈಕೋರ್ಟಿಗೆ ಮನವಿ ಸಲ್ಲಿಸಿತ್ತು. ಈ ಮನವಿಗೆ ತಡೆಯಾಜ್ಞೆ ವಿಧಿಸಿದ್ದ ಹೈಕೋರ್ಟು ಈಗ ಅರ್ಜಿ ಹಿಂತೆಗೆಯಲು ಅನುಮತಿ ನೀಡಿದೆ.




