ನವದೆಹಲಿ: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ(MYAS) ರಾಷ್ಟ್ರ ಧ್ವಜದ ಕುರಿತು ಆನ್‌ಲೈನ್ ರಸಪ್ರಶ್ನೆ ಆಯೋಜಿಸಿದ್ದು, ಇದರಲ್ಲಿ 21 ರಿಂದ 29 ವರ್ಷ ವಯಸ್ಸಿನವರು ಭಾಗವಹಿಸಬಹುದು. ಈ ಕ್ವಿಜ್ ನಲ್ಲಿ 25ಕ್ಕಿಂತ ಹೆಚ್ಚು ಅಂಕ ಗಳಿಸಿದ ಸ್ಪರ್ಧಿಗಳು, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಿಯಾಚಿನ್‌ಗೆ ಭೇಟಿ ನೀಡುವ ಅವಕಾಶ ಪಡೆಯಲಿದ್ದಾರೆ.
ಸಚಿವಾಲಯದ ಪ್ರಕಾರ, ಈ ರಸಪ್ರಶ್ನೆಯು "ದೇಶಭಕ್ತಿಯನ್ನು ಬೆಳೆಸುತ್ತದೆ ಮತ್ತು ಭಾರತದ ರಾಷ್ಟ್ರ ಧ್ವಜದ ಬಗ್ಗೆ ಜಾಗೃತಿ ಮೂಡಿಸುತ್ತದೆ".
"MYBharat ಪೋರ್ಟಲ್ (mybharat.gov.in) ನಲ್ಲಿ ಆಯೋಜಿಸಲಾದ ಈ ಆನ್‌ಲೈನ್ ಕ್ವಿಜ್ ನಲ್ಲಿ 21 ರಿಂದ 29 ವರ್ಷದ ಎಲ್ಲಾ ನಾಗರಿಕರು ಭಾಗವಹಿಸಲು ಮತ್ತು ತ್ರಿವರ್ಣ ಧ್ವಜದ ಬಗ್ಗೆ ತಮ್ಮ ಜ್ಞಾನ ಪರೀಕ್ಷಿಸಲು ಆಹ್ವಾನಿಸುತ್ತದೆ" ಎಂದು ಸಚಿವಾಲಯ ತಿಳಿಸಿದೆ.
ಇದು ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
"ಸಿಯಾಚಿನ್ ಭೇಟಿಗೆ ವಿಜೇತರ ಆಯ್ಕೆಯು 21 ರಿಂದ 29 ವರ್ಷದೊಳಗಿನ ಯುವಕರಿಗೆ ಸೀಮಿತವಾಗಿರುತ್ತದೆ. ಟಾಪ್ ಸ್ಕೋರರ್‌ಗಳಲ್ಲಿ ಅಂತಿಮವಾಗಿ 25 ವಿಜೇತರನ್ನು ಕಂಪ್ಯೂಟರ್ ಆಧಾರಿತ ಲಾಟರಿ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ" ಎಂದು ಸಚಿವಾಲಯ ತಿಳಿಸಿದೆ.




