ಮಂಜೇಶ್ವರ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಮೂಡಂಬೈಲಿನ ವಾಗ್ದೇವಿ ಯಕ್ಷಗಾನ ಕಲಾಸಂಘದವರಿಂದ ಭೀಷ್ಮ ವಿಜಯ ಹಾಗೂ ಭೀಷ್ಮ ಸೇನಾಧಿಪತ್ಯ ಎಂಬ ಕಥಾಭಾಗಗಳ ತಾಳಮದ್ದಳೆ ಜರಗಿತು. ಪಾತ್ರವರ್ಗದಲ್ಲಿ ಹರಿ ಭಟ್ ಕೃಷ್ಣಾಪುರ ಮಠ, ಬಾಲಕೃಷ್ಣ ಆಚಾರ್ಯ ನೀರ್ಚಾಲು, ನಾರಾಯಣ ನಾವಡ ಮೂಡಂಬೈಲು ಹಾಗೂ ಶಾಶ್ವತಿ ನಾವಡ ಮೂಡಂಬೈಲು ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ವಾಸುದೇವ ಕಲ್ಲೂರಾಯ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು.

.jpg)
