ಬದಿಯಡ್ಕ: ಬದಿಯಡ್ಕದ ಬೋಳುಕಟ್ಟೆಯಲ್ಲಿ ಬೈಕ್ ಹಾಗೂ ಜೀಪು ಡಿಕ್ಕಿಯಾಗಿ ಬೈಕ್ ಸವಾರ, ಮಧೂರು ಕೋಡಿಮಜಲು ನಿವಾಸಿ ವಿಜಯಕುಮಾರ್ ಯಾನೆ ಪಮ್ಮು(38)ಮೃತಪಟ್ಟಿದ್ದಾರೆ. ಬೈಕ್ ಹಿಂಬದಿ ಸವಾರ, ಹಾಗೂ ಇವರ ಸ್ನೇಹಿತ ನೀರ್ಚಾಲ್ ನಿವಾಸಿ ರಾಧಾಕೃಷ್ಣ ಎಂಬವರು ಗಂಭೀರಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ತಡ ರಾತ್ರಿ ಬದಿಯಡ್ಕದ ಬೋಳುಕಟ್ಟೆ ಸಮೀಪ ಅಪಘಾತ ನಡೆದಿದ್ದು ಗಂಭೀರ ಗಾಯಗೊಂಡಿದ್ದ ಇಬರನ್ನೂ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ವಿಜಯಕುಮಾರ್ ಮೃತಪಟ್ಟಿದ್ದಾರೆ. ಇವರಿಬ್ಬರೂ ಬೈಕ್‍ನಲ್ಲಿ ತಮ್ಮ ಸ್ನೇಹಿತನ ಮನೆಗೆ ತೆರಳಿ ವಾಪಸಾಗುವ ಮಧ್ಯೆ ಅಪಘಾತ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೆÇೀಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿಜಯಕುಮಾರ್ ಅವರು ಬಿಎಂಎಸ್ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಟನೆ ಸದಸ್ಯರಾಗಿದ್ದು, ಸಂಘ ಶಕ್ತಿ ಮಧೂರು, ಯುವಕೇಸರಿ ಮಧೂರು, ಮಿತ್ರ ಕಲಾವೃಂದ ಮಧೂರು ಮುಂತಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮಧೂರು ಬ್ರಹ್ಮಕಲಶೋತ್ಸವದಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.


