ಮಂಜೇಶ್ವರ: ಮನೆಯವರನ್ನು ಹೊರಕರೆದು, ಬಂದೂಕು ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಗ್ರಮಂಜೇಶ್ವರ ನಿವಾಸಿ ರಶೀದ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಂಗ್ರಮಂಜೇಶ್ವರ ಕಾಡಿಯಾರ್ ನಿವಾಸಿ ಮಹಮ್ಮದ್ ಸಮೀರ್(20)ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಭಾನುವಾರ ತಡರಾತ್ರಿ ಮನೆಗೆ ತಲುಪಿದ ತಂಡ ತನ್ನನ್ನು ಹಾಗೂ ಮನೆಯವರನ್ನು ಹೊರಕರೆದು ರಶೀದ್ ಕೈಯಲ್ಲಿದ್ದ ಬಂದೂಕು ತೋರಿಸಿ ಬೆದರಿಕೆಯೊಡ್ಡಿ ತೆರಳಿರುವುದಾಗಿ ಸಮೀರ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

