ವಿಶ್ವಸಂಸ್ಥೆ : 'ಮುಕ್ತ, ನಿಯಮ ಆಧರಿತ ಕಡಲಿನ ಆದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಬದ್ಧತೆ ವ್ಯಕ್ತಪಡಿಸಿರುವ ಭಾರತ, ಕಡಲ ಭದ್ರತೆಯು ಅಂತರರಾಷ್ಟ್ರೀಯ ಸಹಯೋಗದ ಸಾಮೂಹಿಕ ಸವಾಲು ಹೊಂದಿದೆ' ಎಂದು ಅಭಿಪ್ರಾಯಪಟ್ಟಿದೆ.
ಯುಎನ್‌ಎಸ್ಸಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ (ಪಶ್ಚಿಮ) ತನ್ಮಯ್ ಲಾಲ್, 'ಹಿಂದೂ ಮಹಾಸಾಗರದ ಮಾಹಿತಿ ಹಂಚಿಕೆ- ಗುಪ್ತಚರ ಕೇಂದ್ರ ಸ್ಥಾಪನೆ, ಇ- ಸಮುದ್ರ, ಮಾಲಿನ್ಯ ನಿಯಂತ್ರಿಸುವ ನೌಕೆ ನಿಯೋಜನೆ (ಸಮುದ್ರ ಪ್ರಚೆಟ್), ಐಒಎಸ್ ಸಾಗರ್, ಆಳ ಸಾಗರ ಮಿಷನ್, ಇಂಡೋ- ಫೆಸಿಫಿಕ್ ಹಾಗೂ ಅದರಾಚೆಗೂ ನೌಕಾ ಸಹಕಾರ ಹೆಚ್ಚಿಸಲು ಆದ್ಯತೆ ನೀಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.
'ಸಮುದ್ರದ ಕಾನೂನಿನ ಮೇಲೆ ವಿಶ್ವ ಸಂಸ್ಥೆಯ ಸಮಾವೇಶದ ನೀತಿ ಅನುಗುಣವಾಗಿ 'ಮುಕ್ತ, ನಿಯಮ ಆಧರಿತ ಕಡಲಿನ ಆದೇಶಕ್ಕೆ ಭಾರತವು ಬದ್ಧವಾಗಿದೆ' ಎಂದು ಲಾಲ್ ಪುನರುಚ್ಚರಿಸಿದ್ದಾರೆ.




