ಕುಂಬಳೆ: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರಿನ ಚಿನ್ನಮೊಗರು ರಸ್ತೆಯಲ್ಲಿ ಬೈಕ್ ಪಲ್ಟಿಯಾಘಿ ಗಂಭೀರಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಚಿನ್ನಮೊಗರು ನಿವಾಸಿ ನವೀನ್ ಚಂದ್ರ ಶೆಟ್ಟಿ ಅವರ ಪತ್ನಿ ಎಂ.ಕೆ.ಎಚ್. ಸುಲೋಚನಾ (56)ಮೃತಪಟ್ಟಿದ್ದಾರೆ.
ಇವರ ಪುತ್ರ ಅಭಿಷೇಕ್ ಶೆಟ್ಟಿ ಚಲಾಯಿಸುತ್ತಿದ್ದ ಬೈಕಿನಲ್ಲಿ ಜುಲೈ 28ರಂದು ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಸಂದರ್ಭ ಎದುರಿನಿಂದ ಆಗಮಿಸಿದ ಲಾರಿಯೊಂದಕ್ಕೆ ಹಾದಿಮಾಡಿಕೊಡುವ ಯತ್ನದಲ್ಲಿದ್ದಾಗ ಬೈಕ್ ಪಲ್ಟಿಯಾಗಿತ್ತು.




