ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ಎಂಎಸ್‍ಎಫ್, ಎಸ್‍ಎಫ್‍ಐ ಹಾಗೂ ಕೆಎಸ್‍ಯು ವಿದ್ಯಾರ್ಥಿ ಸಂಘಟನೆಗಳ ಬೆದರಿಕೆಯನ್ನು ಲೆಕ್ಕಿಸದೆ, ಕಾಸರಗೋಡು ಸರ್ಕಾರಿ ಕಾಲೇಜು ಎಬಿವಿಪಿ ಘಟಕವು 'ದೇಶ ವಿಭಜನೆಯ ಕರಾಳ ದಿನ'ವನ್ನು ಆಚರಿಸಿತು.
ದೇಶ ವಿಭಜನೆಯ ಕರಾಳತೆಯ ಬಗ್ಗೆ ಎಬಿವಿಪಿ ಕಾಸರಗೋಡು ಕಾಲೇಜು ಘಟಕ ಕಾರ್ಯದರ್ಶಿ ಶಿವರೂಪ್ ನೇತೃತ್ವದಲ್ಲಿ ಅಳವಡಿಸಿದ್ದ ಭಿತ್ತಿಪತ್ರಗಳನ್ನು ಎಬಿವಿಪಿಯೇತರ ವಿದ್ಯಾರ್ಥಿ ಸಂಘಟನೆಗಳು ನಾಶಮಾಡುವುದರ ಜತೆಗೆ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಮಾಡಿತ್ತು. ವಿದ್ಯಾರ್ಥಿ ಸಂಘಟನೆಗಳ ಬೆದರಿಕೆ ಹಾಗೂ ಹಲ್ಲೆಯನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಅಚಲವಾಗಿ ನಿಂತು ಕಾಲೇಜಿನೊಳಗೆ ಕಾರ್ಯಕ್ರಮ ಆಯೋಜಿಸಿದರು. ಎಂಎಸ್‍ಎಫ್, ಎಸ್‍ಎಫ್‍ಐ ಹಾಗೂ ಕೆಎಸ್‍ಯು ವಿದ್ಯಾರ್ಥಿ ಸಂಘಟನೆಗಳು ಹಾಳುಗೆಡವಿದ್ದ ಪೆÇೀಸ್ಟರ್‍ಗಳನ್ನು ಮತ್ತೆ ಅಳವಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಎಬಿವಿಪಿ ಹೊರತುಪಡಿಸಿ ಎಡ ಹಾಗೂ ಐಕ್ಯರಂಗ ಪೋಷಕ ವಿದ್ಯಾರ್ಥಿ ಸಂಗಟನೆಗಳ ವಿರೋಧದ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾದ ನಡುವೆಯೂ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು.


