HEALTH TIPS

ಕುಂಬಳೆ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ-ಮದಕ ವಸ್ತು ವಿರುದ್ಧ ಅಭಿಯಾನ

ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  (ರಿ)ವತಿಯಿಂದ ಮಂಜೇಶ್ವರ ತಾಲೂಕಿನ ಕುಂಬಳೆ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ  ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಕುಂಬಳೆ ಸರ್ಕಾರಿ ಸೀನಿಯರ್ ಬೇಸಿಕ್ ಶಾಲೆಯಲ್ಲಿ ಜರುಗಿತು.  ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪೆÇಲೀಸ್ ಅಧಿಕಾರಿ ಶರತ್‍ಬಾಬು,  ಶಾಲಾ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್, ಜನಜಾಗೃತಿ ವೇದಿಗೆ ವಲಯ ಅಧ್ಯಕ್ಷರು ಮಹೇಶ್ ಪುಣಿಯೂರು, ಸದಸ್ಯೆ ವಿದ್ಯಾ ಪೈ, ಮೇಲ್ವಿಚಾರಕರು, ಸೇವಾಪ್ರತಿನಿಧಿ, ಅಧ್ಯಾಪಕರು, ಮಕ್ಕಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಮಾದಕ ವಸ್ತುಗಳಿಗೆ, ಅಮಲು ಪದಾರ್ಥಗಳ ದುಶ್ಚಟಕ್ಕೆ ಬಲಿಯಾಗದೆ ಸತ್ಪ್ರಜೆಗಳಾಗಿ ಹೆತ್ತವರ ಕನಸನ್ನು ನನಸು ಮಾಡುವ ಹೊಣೆಗಾರಿಕೆಯೊಂದಿಗೆ ಮುಂದುವರಿಯುವ ಪಣತೊಡಬೇಕು ಎಂದು ಪೆÇಲೀಸ್ ಅಧಿಕಾರಿ ಶರತ್ ಬಾಬು ತಿಳಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries