ಉಪ್ಪಳ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ. ದೇಶದ ಸೈನಿಕ ಶಕ್ತಿ ಓಪರೇಶನ್ ಸಿಂಧೂರ ಮೂಲಕ ಜಗತ್ತು ಮತ್ತೆ ಕಂಡಿದೆ. ಉತ್ತರ ನೀಡಲು ಹೊರಟರೆ ಭಾರತದ ಶಕ್ತಿಯನ್ನು ಮಣಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯಾರು ನಾರಾಯಣ ಶೆಟ್ಟಿ ಹೇಳಿದರು.
ಬಾಯಿಕಟ್ಟೆಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಬುಧವಾರ ನಡೆದ ತಿರಂಗ ಯಾತ್ರೆಯನ್ನು ನಿವೃತ್ತ ಸೈನಿಕ ವಸಂತ್ ಕೃಷ್ಣ ಶರ್ಮ ಹಾಗೂ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅವರಿಗೆ ದೇಶ ಧ್ವಜ ಹಸ್ತಾಂತರ ಮಾಡಿ ಉದ್ಘಾಟಿಸಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕ್ರಾಂತಿಯ ರೂಪ, ಸಂವಿಧಾನ ದೇಶದ ಆತ್ಮ, ದೇಶದ ಅಸ್ಮಿತೆಯನ್ನು ಪ್ರಶ್ನೆಸುವ ದೇಶದ್ರೋಹಿಗಳನ್ನು ದೇಶ ಪ್ರೇಮಿಗಳು ಹಿಮ್ಮೆಟಿಸಬೇಕೆಂದು ಕರೆ ನೀಡಿದರು.
ನಿವೃತ್ತ ಸೇನಾನಿ ಐತಪ್ಪ ಅಡ್ಯಂತ್ತಾಯ ಉಪಸ್ಥಿತರಿದ್ದರು. ಎಸ್.ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೊಂಡ, ಸದಾಶಿವ ಚೇರಾಲ್, ಮಂಜುನಾಥ್ ಶೆಟ್ಟಿ, ಸಂದೀಪ್ ಬಾಯಾರ್, ಪ್ರವೀಣ್ ಪಟ್ಲ, ಸತ್ಯಶಂಕರ್ ಉಪಸ್ಥಿತರಿದ್ದರು.
ಕೆ.ವಿ. ಭಟ್, ಸನತ್ ರೈ, ಬಾಲಕೃಷ್ಣ, ಪುಷ್ಪಲಕ್ಷ್ಮಿ, ಜಯಲಕ್ಷ್ಮಿ ಭಟ್, ಮಮತಾ, ರಾಜೀವಿ, ತುಳಸಿ ಕುಮಾರಿ, ಗಣೇಶ ಪ್ರಸಾದ್, ನಾಗೇಶ್ ಬಳ್ಳೂರು, ಪೊಯ್ಯೆ ಭಾಸ್ಕರ್ ನೇತೃತ್ವ ನೀಡಿದರು. ಸುಬ್ರಮಣ್ಯ ಭಟ್ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು.




.jpg)
.jpg)
