ಕಾಸರಗೋಡು: ಜಿಲ್ಲಾ ಮಟ್ಟದ ಕೃಷಿಕರ ದಿನವನ್ನು ಮೊಗ್ರಾಲಪುತ್ತೂರು ಗ್ರಾಮ ಪಂಚಾಯಿತಿ ಕೃಷಿ ಭವನದ ಆಶ್ರಯದಲ್ಲಿ ಆಚರಿಸಲಾಯಿತು. ಕೇರಳದಲ್ಲಿ ಸಿಂಹ ಮಾಸದ ಒಂದನೇ ದಿನವಾದ ಆ. 17ನ್ನು ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಕೀಲೆ ಸಮೀರ ಫೈಸಲ್ ಅಧ್ಯಕ್ಷತೆ ವಹಿಸಿದ್ದರು, ಕೃಷಿ ಉಪನಿರ್ದೇಶಕ ಪಿ.ಕೆ. ಸ್ಮಿತಾ ನಂದಿನಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕೆ.ಎಫ್. ಮುಹಮ್ಮದ್ ಹಾಜಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರ, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದಕದೀಜಾ ಅಬ್ದುಲ್ ಕಾದರ್, ನಿಸಾರ್ ಕುಳಂಗರ, ಪ್ರಮೀಳಾ ಮಜಲ್, ಬ್ಲಾಕ್ ಪಂಚಾಯಿತಿ ಸದಸ್ಯ ಸೀನತ್ ನಜೀರ್, ಕೃಷಿ ಸಹಾಯಕ ನಿರ್ದೇಶಕಿ ಅಶ್ವತಿ ಟಿ ವಾಸು, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ. ಸುಲೋಚನಾ, ಅಸ್ಮಿನಾ ಶಾಫಿ, ಗಿರೀಶ್, ಜುಬೈರಿಯಾ ಶಿಹಾಬ್, ಕೆ.ಪಿ. ಸಂಪತ್ ಕುಮಾರ್, ಪಿ.ಎಂ. ಮಹಮ್ಮದ್ ರಫಿ, ಶಮೀಮಾ ಸಾದಿಕ್, ಮಲ್ಲಿಕಾ ಧರ್ಮಪಾಲ್, ನೌಫಲ್ ಪುತ್ತೂರು, ಕೆವಿಕೆ ಯೋಜನಾ ಸಂಯೋಜಕ ಡಾ.ಟಿ.ಎಸ್. ಮನೋಜ್, ಪಂಚಾಯಿತಿ ಕಾರ್ಯದರ್ಶಿ ಎ.ಆರ್. ಪ್ರಶಾಂತ್ ಕುಮಾರ್, ಪಶು ವೈದ್ಯಾಧಿಕಾರಿ ವಿ.ಬಿ. ಸೀನಾ, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ರಜಿಯಾ,ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ಭತ್ತ ಗದ್ದೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಕೃಷಿ ಅಧಿಕಾರಿ ವಿ. ಅಕ್ಷತಾ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಕೆ. ಮುರಳೀಧರನ್ ನಾಯರ್ ವಂದಿಸಿದರು.




