ಕಾಸರಗೋಡು: ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ(ಕೆಯುಡಬ್ಲ್ಯೂಜೆ)ಜಾರಿಗೆ ತಂದಿರುವ ಆರೋಗ್ಯ ವಿಮಾ ಟಾಪ್-ಅಪ್ ಯೋಜನೆಯ ದಾಖಲಾತಿ ಶಿಬಿರ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿನಡೆಯಿತು. ಅಂಚೆ ಇಲಾಖೆಯ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಐಪಿಪಿಬಿ ಕಾಸರಗೋಡು ವ್ಯವಸ್ಥಾಪಕ ಮಾನಸ್ ಸಿ. ಜಾರ್ಜ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಟಾಪ್ ಅಪ್ ಯೋಜನೆಯು ಎರಡು ಲಕ್ಷದಿಂದ 17 ಲಕ್ಷದವರೆಗೆ ಆರೋಗ್ಯ ವಿಮಾ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ. ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರದೀಪ್ ನಾರಾಯಣನ್, ಕೋಶಾಧಿಕಾರಿ ಸುರೇಂದ್ರನ್ ಮಡಿಕೈ, ಅಬ್ದುಲ್ಲಕುಞÂ ಉದುಮ, ಶೈಜು ಪಿಲಾತ್ತರ, ಕೆ.ವಿ ಪದ್ಮೇಶ್, ರಂಜಿತ್ ಮನ್ನಿಪಾಡಿ ಉಪಸ್ಥಿತರಿದ್ದರು.




