HEALTH TIPS

ಮಂಜೇಶ್ವರ : ಬೀದಿ ನಾಯಿಗಳ ಅಟ್ಟಹಾಸದ ವಿರುದ್ಧ ಇಲ್ಲ ಕ್ರಮ: ಮುಸ್ಲಿಂ ಲೀಗ್ ನಿಂದ ಬೃಹತ್ ಪ್ರತಿಭಟನೆ

ಮಂಜೇಶ್ವರ:  ಬೀದಿ ನಾಯಿಗಳ ಅಟ್ಟಹಾಸದಿಂದ ತತ್ತರಿಸಿರುವ ಜನತೆಯ ಕೂಗನ್ನು ಕೇಳಲು ತಯಾರಾಗದ ಮಂಜೇಶ್ವರ ಗ್ರಾಮ ಪಂಚಾಯತು ಅಧಿಕೃತರ  ವಿರುದ್ಧ 

ಶುಕ್ರವಾರದಂದು  ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮಂಜೇಶ್ವರ ಪಂಚಾಯತು ಸಮಿತಿ ವತಿಯಿಂದ  ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಈ ಪ್ರತಿಭಟನೆಯು ಮಂಜೇಶ್ವರದ  ಪ್ರಮುಖ ಬೀದಿಗಳಲ್ಲಿ ಅಧಿಕಾರಸ್ಥರ ಬೇ ಜವಾಬ್ದಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಕೊಂಡು ಮಾಡಿಕೊಂಡು ಬಳಿಕ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಧರಣಿಯನ್ನು ನಡೆಸಿದರು. ಪ್ರತಿಭಟನಾಕಾರರು "ಬೀದಿ ನಾಯಿಗಳನ್ನು ನಿಯಂತ್ರಿಸದಿರುವುದು ಗ್ರಾಮ ಪಂಚಾಯತ್ ವಿಫಲತೆಯ ಸಂಕೇತ" ಎಂದು ಘೋಷಣೆಗಳನ್ನು ಕೂಗಿದರು.

ಮುಸ್ಲಿಂ ಲೀಗ್ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮುಸ್ಲಿಂ ಲೀಗ್ ಮಂಡಲ ಕೋಶಾಧಿಕಾರಿ ಸೈಯದ್ ಸೈಫುಲ್ಲಾ ತಂಘಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಲೀಗ್ ಪಂಚಾಯತ್ ಅಧಿಕಾರದಲ್ಲಿರುವಾಗ ಹುರುಳಿಲ್ಲದ ಆರೋಪಗಳನ್ನು ಹೊರಿಸಿ ಜನರನ್ನು ಮಂಕು ಮರ್ಲು ಮಾಡಿ ಪಕ್ಷ ಬೇಧ ಮರೆತು ಲೀಗಿನವರಿಗೆ ಪಾಠ ಮಾಡಲು ಹೊರಟ ಈಗಿನ ಅಧಿಕಾರಸ್ಥರು ಜನರ ಜೀವ ಭದ್ರತೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಬೀದಿ ನಾಯಿಗಳಿಗೆ ಕಡಿವಾಣ ಹಾಕದೆ ನಾಯಿ ದಾಳಿಗೆ ಬಲಿಯಾಗುತ್ತಿರುವ ಮಕ್ಕಳ ಹಾಗೂ ಹಿರಿಯರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಮಂಜೇಶ್ವರ ತ್ಯಾಜ್ಯದಿಂದ ಗುಬ್ಬೆದ್ದು ನಾರುತ್ತಿದೆ. ಇತರರಿಗೆ ಪಾಠ ಮಾಡಲು ಹೊರಟ ಪಂಚಾಯತ್ ಅಧಿಕಾರಸ್ಥರಿಗೆ ಲಜ್ಜೆ ಇರಬೇಕು. ನಿಯಂತ್ರಣ ಕ್ರಮಗಳನ್ನು ತಕ್ಷಣ ಜಾರಿಗೆ ತರಲಾಗದಿದ್ದರೆ, ಮುಂದಿನ ಹಂತದಲ್ಲಿ ತೀವ್ರ ಹೋರಾಟ ನಡೆಸಲಾಗುವುದು," ಎಂದು ಗುಡುಗಿದರು

ಈ ಸಂದರ್ಭ ನೇತಾರರಾದ ಮುಸ್ತಫ ಉದ್ಯಾವರ, ಅಬ್ದುಲ್ ರಹ್ಮಾನ್ ಹಾಜಿ,  ಮುಕ್ತಾರ್, ಹಸೈನಾರ್ ಸೆವನ್ ಸ್ಟಾರ್, ಫಾರೂಕ್, ನಾಸರ್ ಇಡಿಯ, ಹನೀಫ್, ಸಮದ್, ಬಶೀರ್ ಕನಿಲ, ಮುಂತಾಸ್ ಸಮೀರ, ರಿಯಾಝ್, ಮುನೀರ್, ಕಲೀಲ್, ಮುಂತಾಸ್ ಸಮೀರ ಹಾಗೂ ಎಂ ಎಸ್ ಎಫ್ ಹಾಗೂ ಎಸ್ ಟಿ ಯು ನೇತಾರರು ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries