ಮಂಜೇಶ್ವರ: ಮಂಜೇಶ್ವರ ಪೋಲೀಸ್ ಠಾಣಾ ಎಎಸ್ಟೈ ಯೊಬ್ಬರು ಪೋಲೀಸ್ ಕ್ಟಾರ್ಟರ್ಸ್ ನೊಳಗೆ ಆತ್ಮಹತ್ಯೆಗೈದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುತ್ತಿಕೋಲ್ ನಿವಾಸಿ ಮಧು (50) ಸಾವನ್ನಪ್ಪಿದ ದುರ್ದೈವಿ. ಶುಕ್ರವಾರ ಬೆಳಿಗ್ಗೆ ಪೆÇಲೀಸ್ ಕ್ವಾರ್ಟರ್ಸ್‍ನಲ್ಲಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ
ಮಾಹಿತಿ ಅರಿತು ಉನ್ನತ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಒಂದು ಡೆತ್ ನೋಟ್ ಕ್ವಾರ್ಟರ್ಸ್‍ನಿಂದ ಪತ್ತೆಯಾಗಿದೆ ಎಂಬ ಮಾಹಿತಿ ಇದೆ.
ಮಧು ಅವಿವಾಹಿತರಾಗಿದ್ದರು. ಠಾಣೆಗೆ ಬರುವ ನಾಗರಿಕರೊಡನೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ ಒಬ್ಬ ಕರ್ತವ್ಯಪರ ಅಧಿಕಾರಿದ್ದರು ಮಾತ್ರವಲ್ಲದೆ ಪ್ರಕರಣ ತನಿಖೆಯಲ್ಲಿಯೂ ಉತ್ತಮ ರೀತಿಯಲ್ಲಿ ಕೌಶಲ್ಯ ಪ್ರದರ್ಶಿಸುತ್ತಿರುವ ನಿಷ್ಟಾವಂತ ಅಧಿಕಾರಿಯಾಗಿದ್ದರೆಂಬುದಾಗಿಯೂ ತಿಳಿದು ಬಂದಿದೆ.


