ಮುಳ್ಳೇರಿಯ: ಅಡೂರು ಮಣಿಯೂರು ಮೂಲಡ್ಕ ನಿವಾಸಿ, ಪಿಕ್‍ಅಪ್ ವಾಹನ ಚಾಲಕ ಯೋಗೀಶ್(28)ಎಂಬವರ ಮೃತದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗ್ಗೆ ಯೋಗೀಶ್ ಮನೆಯಲ್ಲಿಲ್ಲದಿರುವುದರಿಂದ ಹುಡುಕಾಡುವ ಮಧ್ಯೆ ಮೃತದೇಹ ನೇಣಿನಲ್ಲಿ ನೇತಾಡುತ್ತಿರುವುದು ಕಂಡು ಬಂದಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




