ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಯಾರು ಸನಿಹದ ತಲೆಂಗಳ ಬಿಕರ್ನಕೋಡಿ ನಿವಾಸಿ ಚೋಮ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬಟ್ಟೆ, ದಾಖಲೆಗಳು ಸೇರಿದಂತೆ ವಿವಿಧ ಸಾಮಗ್ರಿ ಉರಿದು ನಾಶಗೊಂಡಿದೆ.
ಬೆಳಗ್ಗಿನ ಜಾವ ಮನೆ ಕೊಠಡಿಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಮನೆಯಲ್ಲಿದ್ದ ಚೋಮ ಅವರ ಪತ್ನಿ, ಪುತ್ರ, ಸೊಸೆ ಮನೆಯಿಂದ ಹೊರಕ್ಕೆ ಧಾವಿಸಿದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಠಡಿಯೊಳಗಿದ್ದ ಮಕ್ಕಳ ಶಾಲಾ ಪುಸ್ತಕ, ಬಟ್ಟೆಬರೆ, ರೇಶನ್‍ಕಾರ್ಡು, ಜಾಗದ ದಾಖಲೆಪತ್ರ, ಪೀಠೋಪಕರಣ ಉರಿದು ನಾಶಗೊಂಡಿದೆ. ಚೋಮ ಅವರ ಮನೆಗೆ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಪದಾಧಿಕಾರಿಗಳು, ಕಂದಾಯ, ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿನೀಡಿ ಮಾಹಿತಿ ಸಂಗ್ರಹಿಸಿದರು.




