ಮಂಜೇಶ್ವರ: ವರ್ಕಾಡಿ ಪ್ರದೇಶದಲ್ಲಿ ರಾತ್ರಿ ವೇಳೆ ಬೇಟೆಯಾಡಲು ಆಗಮಿಸಿದ್ದ ತಂಡವನ್ನು ಅಪಹರಿಸಿ ಹಲ್ಲೆಗೈದು, ನಗದು, ಬಂದೂಕು ಹಾಗೂ ಮದ್ದುಗುಂಡು ವಶಪಡಿಸಿ, ಮೂರು ಲಕ್ಷ ರೂ. ಮೊತ್ತಕ್ಕಾಗಿ ಬೇಡಿಕೆಯಿರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ವರ್ಕಾಡಿ ಪುರುಷಂಗೋಡಿ ನಿವಾಸಿ ಮಹಮ್ಮದ್ ರಾಸಿಕ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಹಿಂಬಾಲಿಸಿ ಬಂಧಿಸಿದ್ದಾರೆ.
ಬೇಟೆಯಾಡುವ ನಿಟ್ಟಿನಲ್ಲಿ ಕುತ್ತಿಕ್ಕೋಲ್ ನಿವಾಸಿಗಳಾದ ನಿತಿನ್‍ರಾಜ್ ಮತ್ತು ಈತನ ಸ್ನೇಹಿತರನ್ನು ತಂಡವೊಂದು ಅಪಹರಿಸಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದಲ್ಲಿ ಅಂಗಡಿಪದವು ನಿವಾಸಿ ಸೈಫುದ್ದೀನ್ ಯಾನೆ ಪೂಚ್ಚ ಸೈಫುದ್ದೀನ್, ಈತನ ಸಹಚರರಾದ ಎಂ.ಎಚ್ ಮೊಯ್ದೀನ್, ಉಳಿಯತ್ತಡ್ಕದ ಮಹಮ್ಮದ್ ಸುಹೈಲ್, ಮಹಮ್ಮದ್ ಅಮೀರ್ ಎಂಬವರನ್ನು ಈ ಹಿಂದೆ ಬಂಧಿಸಲಾಗಿತ್ತು.




