ಮಂಜೇಶ್ವರ: ವರ್ಕಾಡಿ ಪಾವೂರು ಮುಡಿಮಾರಿನಲ್ಲಿ ಸ್ವಾತಂತ್ರ್ಯ ದನಾಚರಣೆಯನ್ನು ರಸ್ತೆ ದುರಸ್ತಿಗೊಳಿಸುವ ಮೂಲಕ ಯುವಕರ ತಂಡವೊಂದು ಆಚರಿಸಿಕೊಂಡಿತು. ಮುಡಿಮಾರು ಬಸ್ ನಿಲ್ದಾಣದಿಂದ ತೊಡಗಿ ಮುಡಿಮಾರು ಮಲರಾಯ ಕ್ಷೇತ್ರದ ವರೆಗಿನ ಶಿಥಿಲಾವಸ್ಥೆಯಲ್ಲಿದ್ದ ರಸ್ತೆಯನ್ನು ಮುಡಿಮಾರಿನ ಯುವಕರ ತಂಡವೊಂದು ಶ್ರಮದಾನದ ಮೂಲಕ ದುರಸ್ತಿ ನಡೆಸಿದರು. ರಸ್ತೆಯಲ್ಲಿ ದಿನವೊಂದಕ್ಕೆ ಹಲವು ವಾಹನಗಳು ಪ್ರಸಕ್ತ ರಸ್ತೆಯಲ್ಲಿ ಸಂಚರಿಸುತ್ತಿದ್ದು ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ನಡೆದುಹೋಗಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ದುರಸ್ತಿಯೊಂದಿಗೆ ರಸ್ತೆ ಅಂಚಿನ ಮರಗಳ ರೆಂಬೆ ಕಡಿದು ಶುಚಿಗೊಳಿಸಿದರು.





