ಕಾಸರಗೋಡು: ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ 79ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ರಾಜ್ಯ ಇಂಧನ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಧ್ವಜಾರೋಹಣ ನಡೆಸಿದರು. ಈ ಸಂದ¨ರ್ಭ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ದೇಶವು ಕೆಲವೊಂದು ಸಾಂವಿಧಾನಿಕ ಸವಾಲುಗಳನ್ನು ಎದುರಿಸುತ್ತಿದ್ದು, ಇದರ ವಿರುದ್ಧ ಜಾಗರೂಕತೆ ಪಾಲಿಸಬೇಕಾಗಿದೆ. ಸಮಾಜವಾದ, ಜಾತ್ಯತೀತತೆ, ಒಕ್ಕೂಟ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಂಟಾಗುವ ಬೆದರಿಕೆಯನ್ನು ಎದುರಿಸಲು ದೇಶದ ಜನತೆ ಸಂಘಟಿತರಾಗಿ ಹೋರಾಡುವುದು ಅನಿವಾರ್ಯ.
ಭಾರತದ ಜನಸಂಖ್ಯೆಯ ಶೇ. 1 ರಷ್ಟು ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 40 ರಷ್ಟು ಪಾಲು ಹೊಂದಿದ್ದರೆ, ದೇಶದ ಜನಸಂಖ್ಯೆಯ ಶೇ. 50 ರಷ್ಟು ಬಡವರು ಹಂಚಿಕೊಳ್ಳಲು ಒಟ್ಟು ಸಂಪತ್ತಿನ ಶೇ. 3 ರಷ್ಟು ಮಾತ್ರ ಹೊಂದಿದ್ದಾರೆ. ಇಂತಹ ಅಸಮಾನತೆ ದೇಶದ ಅಭಿವೃದ್ಧೀಗೆ ಮಾರಕವಾಗುತ್ತಿದ್ದು, ಇಂತಹ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ತಯಾರಿಸುವುದು ಅನಿವಾರ್ಯ ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗೆ ಪರಿಹಾರ:
ಉಡುಪಿ-ಕರಿಂದಳಂ 400 ಕೆವಿ ವಿದ್ಯುತ್ ಮಾರ್ಗ ಪೂರ್ಣಗೊಂಡ ನಂತರ, ಉತ್ತರ ಕೇರಳದಲ್ಲಿ ವಿದ್ಯುತ್ ವಿತರಣೆಯಲ್ಲಿ ಪ್ರಮುಖ ಪ್ರಗತಿ ಕಂಡುಬರಲಿದೆ ಎಂದು ವಿದ್ಯುತ್ ಸಚಿವ ಕೆ. ಕೃಷ್ಣನ್‍ಕುಟ್ಟಿ ಹೇಳಿದರು. ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗದ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ನಡೆಯುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಕಾಸರಗೋಡಿನ ಮೈಲಾಟಿಯಲ್ಲಿ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಒದಗಿಸಬಹುದಾದ ಬ್ಯಾಟರಿ ಶಕ್ತಿ ಸಂಗ್ರಹಣಾ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಜ್ಯಕ್ಕೆ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಈ ಯೋಜನೆಯನ್ನು 15 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ 13,015 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಸಿ.ಎಚ್. ಕುಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇಂಪಶೇಖರ್ ಮತ್ತು ಜಿಲ್ಲಾ ಪೆÇಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಅವರು ಶುಭಾಶಯ ಕೋರಿದರು. ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸತ್ಯನಾರಾಯಣ ಬೆಳೇರಿ ಅವರಿಗೆ ಸಚಿವರು ಚಿನ್ನದ ಪದಕ ಪ್ರದಾನ ಮಾಡಿ ಸನ್ಮಾನಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದರಿಯಾ, ಎಡಿಎಂಪಿ ಅಖಿಲ್, ಸಹಾಯಕ ಜಿಲ್ಲಾಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಥಸಂಚಲನದಲ್ಲಿ 19 ತುಕಡಿಗಳು ಪಾಲ್ಗೊಮಡಿದ್ದು, ಎಆರ್ ಕ್ಯಾಂಪಿನ ಸಹಾಯಕ ಕಮಾಂಡೆಂಟ್ ಪಥಸಂಚಲನ ನಿಯಂತ್ರಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್, ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್ ಮತ್ತು ಅಬಕಾರಿ ದಳ, ಇರಿಯಣ್ಣಿ ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಪೆÇಲೀಸ್, ನಾಯನ್ಮಾರ್ಮೂಲ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಪೆÇಲೀಸ್, ಚೆಮ್ಮನಾಡ್ ಜಮಾ ಅಟ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಪೆÇಲೀಸ್, ಉದಿನೂರು ಸರ್ಕಾರಿ.ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು ಪೆÇಲೀಸ್, ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಹಿರಿಯ ವಿಭಾಗ ಎನ್‍ಸಿಸಿ, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಸ್ಕೂಲ್ ಎನ್‍ಸಿಸಿ, ನೀಲೇಶ್ವರಂ ರಾಜಾಸ್ ಹೈಯರ್ ಸೆಕೆಂಡರಿ ಸ್ಕೂಲ್ ಎನ್‍ಸಿಸಿ, ಚೆಮ್ನಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಎನ್‍ಸಿಸಿ, ಕಾರಡ್ಕ ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆ ಎನ್‍ಸಿಸಿ, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಸ್ಕೌಟ್ ಮತ್ತು ಗೈಡ್, ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಕೌಟ್ ಮತ್ತು ಗೈಡ್, ಪೆರಿಯ ಜವಾಹರ ನವೋದಯ ವಿದ್ಯಾಲಯದ ಬ್ಯಾಂಡ್ ಸೆಟ್ ಮತ್ತು ಉಲಿಯತುಡ್ಕ ಜೈ ಮಾತಾ ಸೀನಿಯರ್ ಸೆಕೆಂಡರಿ ಶಾಲೆಯ ಬ್ಯಾಂಡ್ ಸೆಟ್‍ನ ಪ್ಲಟೂನ್‍ಗಳು ಪಥಸಂಚಲನದಲ್ಲಿ ಭಾಗವಹಿಸಿತ್ತು. ವಿವಿಧ ತಂಡಗಳಿಂದ ಸಾಂಸ್ಕøಥಿಕ ಕಾರ್ಯಕ್ರಮ ಜರುಗಿತು.
ವಿದ್ಯಾನಗರದ ಸಿವಿಲ್‍ಸ್ಟೇಶನ್‍ನಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಧ್ವಜಾರೋಹಣ ನಡೆಸಿದರು. ಸಮಾರಂಭದಲ್ಲಿ ಎಡಿಎಂ ಪಿ.ಅಖಿಲ್, ಸಹಾಯಕ ಜಿಲ್ಲಾಧಿಕಾರಿಗಳಾದ ಅಜೇಶ್, ಲಿಪು ಎಸ್.ಲಾರೆನ್ಸ್, ಎಂ.ರಮೀಜ್ ರಾಜಾ, ಹುಜೂರು ಶಿರಸ್ತೇದಾರ್ ಕೆ.ಸತೀಶನ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಮೊದಲಾದವರು ಉಪಸ್ಥಿತರಿದ್ದರು.






