ಕಾಸರಗೋಡು: ಅಧ್ಯಯನದೊಂದಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಯೋಜನೆಯನ್ವಯ ಯುವ ಜನತೆಯನ್ನು ವಿದೇಶಗಳಿಗೆ ಕರೆದೊಯ್ಯುವ ಏಜೆನ್ಸಿಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಅನಿವಾರ್ಯ ಎಂಬುದಾಗಿ ರಾಜ್ಯ ಯುವ ಆಯೋಗದ ಅಧ್ಯಕ್ಷ ಎಂ. ಶಾಜರ್ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಯುವ ಆಯೋಗದ ಕಾಸರಗೋಡು ಜಿಲ್ಲಾ ಮಟ್ಟದ ಅದಾಲತ್‍ಗೆ ಸಂಬಂಧಿಸಿದ ಮಾಹಿತಿ ನೀಡಿ ಮಾತನಾಡಿದರು. ವಿದೇಶದಲ್ಲಿ ಉದ್ಯೋಗ ಅರಸುತ್ತಿರುವ ಯುವಕರು ಮತ್ತು ಅವರ ಪೆÇೀಷಕರು ಈ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜತೆಗೆ ಬ್ಯಾಂಕ್ ಖಾತೆಗಳ ಮೂಲಕ ಏಜೆನ್ಸಿಗಳೊಂದಿಗೆ ಹಣದ ವಹಿವಾಟು ನಡೆಸುವಾಗ ದಾಖಲೆಗಳನ್ನು ಇರಿಸಿಕೊಳ್ಳಬೇಕು. ಯುವಜನರ ಮಾನಸಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಮಾದಕ ದ್ರವ್ಯ ಸೇವನೆಯನ್ನು ತಡೆಗಟ್ಟಲು ಪ್ರತ್ಯೇಕ ಯೋಜನೆಗಳೊಂದಿಗೆ ಮುಂದುವರಿಯುವುದರ ಜತೆಗೆ ಹೆಚ್ಚುತ್ತಿರುವ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಆರ್ಥಿಕ ವರ್ಷದಲ್ಲಿ ಎರಡು ಅದಾಲತ್ ನಡೆಸುವ ವಿಷಯವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಕುಂಬಳೆ ಅರಿಕ್ಕಾಡಿ ಮತ್ತು ಶಿರಿಯಾ ಕಡವುಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಡೆಸುತ್ತಿದ್ದವರನ್ನು ವಜಾಗೊಳಿಸಿರುವವಿಷಯ ಚರ್ಚಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ಪಂಚಾಯಿತಿ ಸಮಿತಿಗೆ ಸೂಚಿಸಲಾಯಿತು. ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಹಣವಂಚನೆ, ಸಾಮಾಜಿಕ ಜಾಲತಾಣಗಳ ಮೂಲಕ ಮಾನಹಾನಿಕರ ಮಾಹಿತಿ ಪ್ರಕಟ, ಕಾಲೇಜು ವಿದ್ಯಾರ್ಥಿಗಳನ್ನು ಅನ್ಯಾಯವಾಗಿ ಅಮಾನತುಗೊಳಿಸಲಾಗಿದೆ ಎಂಬ ದೂರು, ಕೌಟುಂಬಿಕ ಹಿಂಸೆ, ಸೈಬರ್ ವಂಚನೆ ಮತ್ತು ಲೋಕಸೇವಾ ಆಯೋಗಕ್ಕೆ ಸಂಬಂಧಿತ ದೂರುಗಳು ಒಳಗೊಂಡಿತ್ತು.
ನ್ಯಾಯಾಲಯದಲ್ಲಿ ಸ್ವೀಕರಿಸಿದ 22 ದೂರುಗಳ ಪೈಕಿ 12 ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು. 10 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು. ಈ ಮಧ್ಯೆ ನಾಲ್ಕು ಹೊಸ ದೂರುಗಳು ಸ್ವೀಕರಿಸಲಾಯಿತು. ರಾಜ್ಯ ಯುವ ಆಯೋಗದ ಅದಾಲತ್‍ನಲಿಆಯೋಗದ ಸದಸ್ಯರಾದ ಪಿ.ಸಿ. ಶೈಜು, ಪಿ.ಪಿ. ರಣ್‍ದೀಪ್,ಆಡಳಿತಾಧಿಕಾರಿ ಕೆ.ಜಯಕುಮಾರ್, ಸಹಾಯಕ ಪಿ.ಅಭಿಷೇಕ್ ಉಪಸ್ಥಿತರಿದ್ದರು.





