ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬಾಚರಣೆ ಸಂಭ್ರಮದಿಂದ ನೆರವೇರಿತು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಯಿಪ್ಪಾಡಿ ಶಿಕ್ಷಕ ತರಬೇತಿ ಕೇಂದ್ರದ (ಡಯಟ್) ನ ಫ್ಯಾಕಲ್ಟಿ ಅಜಿತ ಉದ್ಘಾಟಿಸಿದರು.
ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಸಿ. ಸುಮಾದೇವಿ ಓಣಂ ಆಚರಣೆಯ ಔಚಿತ್ಯ ತಿಳಿಸಿದರು. ಶಿಕ್ಷಕಿ ರೇಷ್ಮಾ ಮಾತನಾಡಿದರು. ಕಾಸರಗೋಡಿನ ಲೋಕೋಪಯೋಗಿ ಸಹ ಅಭಿಯಂತ ಸ್ವಾಲಿಹ ಮತ್ತು ಓವರ್ಸಿಯರ್ ಪ್ರಜೀಬಾ, ಬಿ.ಆರ್.ಸಿ.ಯ ಕ್ಲಸ್ಟರ್ ಸಂಯೋಜಕ ಬ್ರಿಜೇಶ್, ಶಿಕ್ಷಕ ಅಬ್ದುಲ್ ಬಷೀರ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಯಂ.ಪಿ.ಟಿ.ಎ. ಅಧ್ಯಕ್ಷೆ ಸುಷ್ಮಾ ಮತ್ತು ಉಪಾಧ್ಯಕ್ಷೆ ಸೈಬುನಿಸ ಉಪಸ್ಥಿತರಿದ್ದರು. ಓಣಂ ಅಂಗವಾಗಿ ಅನಿತಾ ಟೀಚರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಐಶ್ವರ್ಯ ಮತ್ತು ಅನುಕೃಷ್ಣ ಅವರ ನೇತೃತ್ವದಲ್ಲಿ ಪೂಕಳಂ ರಚಿಸಲಾಯಿತು. ಮಹಾಬಲಿ ವೇಷಧಾರಿಯಾಗಿದ್ದ ಆಸೀಫ್ ರಾಜ್ ನನ್ನು ಓಣಂ ಹಾಡು, ಓಣಂ ಆಟ, ಓಣಂ ಔತಣಗಳ ಮೂಲಕ ಸ್ವಾಗತಿಸಲಾಯಿತು. ಶಿಕ್ಷಕಿ ಧನ್ಯ ಸ್ವಾಗತಿಸಿ, ಜಸೀಲಾ ವಂದಿಸಿದರು. ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಕಾರ್ಯಕ್ರಮ ನಿರೂಪಿಸಿದರು.




.jpg)
