HEALTH TIPS

ಬದಿಯಡ್ಕ ಬಂಟರ ಸಂಘ ಆಟಿದ ಕೂಟ _ಬಂಟರ ಸಮ್ಮಿಲನ

ಬದಿಯಡ್ಕ: ಬದಿಯಡ್ಕ ಬಂಟರ ಸಂಘದ ನೇತೃತ್ವದಲ್ಲಿ ಆಟಿದ ಕೂಟ ಬಂಟರ ಸಮ್ಮಿಳನ ಕಾರ್ಯಕ್ರಮ ಇರಾ ಸಭಾಭವನ ವಲಮಲೆಯಲ್ಲಿ ಜರಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ವಹಿಸಿದರು. ಜಿಲ್ಲಾ ಬಂಟರ ಭವನದ ಕಟ್ಟಡ ನಿರ್ಮಾಣ ಅಧ್ಯಕ್ಷ ಕೊಡುಗೈ ದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿ ಮಾತನಾಡಿ,  ಬಂಟರು ಈ ಭೂಮಿಯ ಮೂಲ ನಿವಾಸಿಗಳು. ತುಳುನಾಡಿನ ಪ್ರತಿಯೊಂದು ಆಚರಣೆಯ ಕಾರಣಿಭೂತರು ಬಂಟ ಸಮಾಜದವರು. ತುಳುನಾಡಿಗೆ ಬಂಟರು ಕೊಟ್ಟ ಕೊಡುಗೆ ಅಪಾರವಾಗಿದೆ. ರಕ್ತಗತವಾಗಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿ, ಕಲೆಗಳಿಗೆ ಬಂಟರು ತಮ್ಮನ್ನು ತೊಡಗಿಸಿಕೊಂಡು ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದಾರೆ ಎಂದರು. 

ಮುಖ್ಯ ಅತಿಥಿಯಾಗಿ ಜಿಲ್ಲಾ ಬಂಟರ ಸಂಘ ಅಧ್ಯಕ್ಷ ವಕೀಲ ಐ. ಸುಬ್ಬಯ್ಯ ರೈ ಮಾತನಾಡಿ, ಆಗಸ್ಟ್ 10 ರಂದು ಜಿಲ್ಲಾ ಬಂಟರ ಸಂಘದ ಸಹಯೋಗದೊಂದಿಗೆ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನೇತೃತ್ವದಲ್ಲಿ ಮಂಗಲ್ಪಾಡಿಯಲ್ಲಿ ನಡೆಯುವ ಜಿಲ್ಲಾ ಬಂಟರ ಸಮ್ಮಿಲನ ಮತ್ತು ಆಟಿದ ಕೂಟ ಕಾರ್ಯಕ್ರಮಕ್ಕೆ ಬದಿಯಡ್ಕ ಪಂಚಾಯತಿಯ ಎಲ್ಲ ಬಂಟರು ಪಾಲ್ಗೊಂಡು ಕಾರ್ಯಕ್ರಮಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು.

ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಮಾತೃ ಸಂಘ ಕಾಸರಗೋಡು ತಾಲೂಕು ಸಂಚಾಲಕ ಸುದೀರ್ ಕುಮಾರ್ ರೈ, ಪೆರಡಾಲ ಕ್ಷೇತ್ರದ ಮೊಕ್ತೇಸರ ಪಿ.ಜಿ. ಜಗನ್ನಾಥ ರೈ, ಫಿರ್ಖ ಸಂಘದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಬಂಟರ ಭವನ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು, ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು.

ದೇವಿಪ್ರಸಾದ್ ಶೆಟ್ಟಿ ಬೆಜ್ಜ ಆಟಿ ತಿಂಗಳ ಮದಿಪು ವಿಷಯದಲ್ಲಿ ಉಪನ್ಯಾಸ ನೀಡಿದರು. ಆಟಿ ತಿಂಗಳ ವಿಶೇಷ ತಿಂಡಿ ತಿನ್ನಿಸುಗಳ ಪ್ರದರ್ಶನವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಉದ್ಘಾಟಿಸಿದರು. ಕಾರ್ಯಕ್ರಮ ಭಾಗವಾಗಿ ವಿವಿಧ ಸ್ಪರ್ಧೆಗಳು ಜರಗಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಗೌರಾರ್ಪಣೆ ನಡೆಯಿತು.

ರಮನಾಥ ರೈ ಮೇಗಿನ ಕಡಾರು, ಜಗನ್ನಾಥ ರೈ ಕೊರೆಕ್ಕಾನ, ಉದ್ಯಮಿ ಹರಿಪ್ರಸಾದ್ ರೈ ಸ್ಕಂದ, ಇರಾ ಸಭಾಭವನದ ಮಾಲಿಕ, ಸಾಮಾಜಿಕ ಮುಂದಾಳು ಗಂಗಾಧರ ಆಳ್ವ ಪೆರಡಾಲ, ರಾಧಾಕೃಷ್ಣ ರೈ ಕಾರ್ಮಾರು, ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು, ಜನಪ್ರತಿನಿಧಿಗಳಾದ ಶುಭಲತಾ ರೈ, ಬಾಲಕೃಷ್ಣ ಶೆಟ್ಟಿ ಮೇಗಿನ ಕಡಾರು, ಸುರೇಶ್ ಶೆಟ್ಟಿ, ರವೀಂದ್ರ ನಾಥ ಶೆಟ್ಟಿ ವಲಮಲೆ, ಗಿರೀಶ್ ರೈ ವಳಮಲೆ, ರತೀಶ್ ರೈ ವಳಮಲೆ, ಸಂತೋಷ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಟಿ ತಿಂಗಳ ವಿಶೇಷ ಬಂಟ ಶೈಲಿಯ ಭೋಜನ ಏರ್ಪಾಡು ಮಾಡಲಾಗಿತ್ತು. ಬದಿಯಡ್ಕ  ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು, ಕೋಶಾಧಿಕಾರಿ ದಯಾನಂದ ರೈ ಮೇಗಿನ ಕಡಾರು ವಂದಿಸಿದರು. ಅಶ್ವಿನಿ ಪ್ರದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ರೈ ಪ್ರಾರ್ಥನೆ ಹಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries