ಬದಿಯಡ್ಕ: ಮಾನ್ಯ ಸಮೀಪದ ಚುಕ್ಕಿನಡ್ಕ ಷಣ್ಮುಖ ನಗರದಲ್ಲಿ ನೂತನವಾಗಿ ನಿರ್ಮಿಸಿದ ಷಣ್ಮುಖ ಫ್ರೆಂಡ್ಸ್ ಕ್ಲಬ್ ನ ನೂತನ ಸ್ವಂತ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ನೂತನ ಕ್ಲಬ್ ಕಛೇರಿಯನ್ನು ಕೆಂಪು ಕಲ್ಲು ಮಾರಾಟಗಾರರಾದ ಚಂದ್ರಶೇಖರ ನಾಯ್ಕ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಚುಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಕುಂಞÂ್ಞ ಕಣ್ಣ ಮಣಿಯಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ಸತ್ಯನಾರಾಯಣ ಚುಕ್ಕಿನಡ್ಕ ವಹಿಸಿದ್ದರು.
ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮಪ್ರಸಾದ್ ಮಾನ್ಯ ಕ್ಲಬ್ಬಿನ ನೂತನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ಬದಿಯಡ್ಕ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮಂಜುನಾಥ ಡಿ ಮಾನ್ಯ, ಚುಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಮದುಸೂಧನ ಚುಕ್ಕಿನಡ್ಕ ಉಪಸ್ಥಿತರಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕಣ್ಣೂರು ಯೂನಿವರ್ಸಿಟಿ ಎಂ.ಎ. ಕನ್ನಡ ವಿಭಾಗದಲ್ಲಿ ವ್ಯಾಸಂಗ ಮಾಡಿ ಗರಿಷ್ಠ ಅಂಕದೊಂದಿಗೆ ತೇರ್ಗಡೆ ಹೊಂದಿದ ಕಿಶೋರ್ ಪಟ್ಟಾಜೆ ಇವರನ್ನು ಸನ್ಮಾನಿಸಲಾಯಿತು. ಪ್ರಜುನ್ ಸ್ವಾಗತಿಸಿ, ನಿರೂಪಿಸಿದರು. ಗಿರೀಶ್ ವಂದಿಸಿದರು.




.jpg)
.jpg)
