ಮಂಜೇಶ್ವರ: ವರ್ಕಾಡಿ ವಲಯ ಬಂಟರ ಸಂಘದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ ಕೋಳ್ಯೂರು ಆಡಿಟೋರಿಯಂನಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಆನೇಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಎನ್ ಟಿ ರೈ ನಾಣಿಲ್ತಡಿ ಸಮಾರಂಭ ಉದ್ಧಾಟಿಸಿದರು. ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾವಳಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಆಟಿಯ ದಿನದ ಮಹತ್ವ ತಿಳಿಸಿದರು. ಶ್ರೀನಾಥ್ ಕೊಂಡೆ ಚಕ್ರಕೋಡಿ, ಸುಧೀಶ್ಚಂದ್ರ ಶೆಟ್ಟಿ ಮುಗೇರು ಗುತ್ತು, ಸುಭಾಷ್ ಚಂದ್ರ ಅಡಪ ಕಲ್ಲೂರ್ ಬೀಡು, ಗಣೇಶ್ ಶೆಟ್ಟಿ ಕಲ್ಲಾಪು ಅಲಬೆಗುತ್ತು, ಮನೋಹರ್ ಶೆಟ್ಟಿ ಕೆದುಂಬಾಡಿ, ಐತಪ್ಪ ಶೆಟ್ಟಿ ದೇವಂದ ಪಡ್ಪು, ಶ್ರೀಧರ ಶೆಟ್ಟಿ ಪಾವೂರು ಗುತ್ತು, ರವೀಂದ್ರನಾಥ ಶೆಟ್ಟಿ ಕೊಡ್ಲಮೊಗರು ನವೀನ್ ಚಂದ್ರ ಶೆಟ್ಟಿ ಬಾಂದೋಡಿ, ಲೋಕೇಶ್ ಶೆಟ್ಟಿ, ಶ್ರೀಧರ್ ಶೆಟ್ಟಿ ಪಾವೂರು ಗುತ್ತು, ವಿಶ್ವನಾಥ ಶೆಟ್ಟಿ ನಡಿಮಾರು, ವಿನಯ್ ಕುಮಾರ್ ಶೆಟ್ಟಿ ಉರ್ಣಿ, ದೇವಪ್ಪ ಶೆಟ್ಟಿ ಚಾವಡಿ ಬೈಲು ಗುತ್ತು, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ ಕತ್ತೆರಿಕೋಡಿ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಆಶಾ ದಿಲೀಪ್ ರೈ ಸುಳ್ಯಮೆ ಸ್ವಾಗತಿಸಿದರು. ದೇವಿ ಪ್ರಸಾದ್ ಶೆಟ್ಟಿ ಬೆಜ್ಜ ಮತ್ತು ಲೋಕೇಶ್ ರೈ ಕರ್ಪಿಕಾರ್ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ಶೆಟ್ಟಿ ಬಾಕ್ರಬೈಲು ವಂದಿಸಿದರು.





