ಕಾಸರಗೋಡು: ಎಸ್‍ಸಿ-ಎಸ್‍ಟಿ ನೌಕರರ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಸ್ಥೆ ಕಾಸರಗೋಡು ಏರಿಯಾ ಸಮಿತಿ ವತಿಯಿಂದ ಎಕ್ಸಲೆನ್ಸ್ ಪ್ರಶಸ್ತಿ ವಿತರಣಾ ಸಮಾರಂಭ ವಿದ್ಯಾನಗರ ಎಎಸ್‍ಎಎಎಫ್ ಕಮ್ಯೂನಿಟಿ ಸ್ಕಿಲ್ ಪಾರ್ಕ್‍ನಲ್ಲಿ ಜರುಗಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಎಸ್‍ಸಿ-ಎಸ್‍ಟಿ ವರ್ಗಕ್ಕೆ ಸೇರಿದ ಸುಮಾರು 50 ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಎಸ್‍ಸಿ-ಎಸ್‍ಟಿ ನೌಕರರ ಸಂಘಟನೆ ಕಾಸರಗೋಡು ಪ್ರಾದೇಶಿಕ ಸಮಿತಿ ಅಧ್ಯಕ್ಷ ಶಂಕರ್ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾಧ್ಯಕ್ಷ ಎಂ.ಸುನೀಲ್ ಕುಮಾರ್, ಚಲನಚಿತ್ರ ನಿರ್ದೇಶಕ ಚಂದ್ರನ್ ನರಿಕೋಡ್, ಹರಿಶ್ಚಂದ್ರ, ಮಾಧವ ಮಾಸ್ಟರ್ ತೆಕ್ಕೆಕ್ಕೆರೆ, ರಾಜೀವನ್, ರಾಮಪ್ಪ ಮಂಜೇಶ್ವರಂ, ಕೃಷ್ಣಪ್ಪ ಮಾಸ್ಟರ್, ಗಣೇಶ್ ಕುಂಬಳೆ, ರಾಘವನ್ ಉದುಮ, ಸುಂದರ ಮಾಸ್ಟರ್, ಪ್ರಾಧ್ಯಾಪಕಿ ಸುಜಾತಾಶಿವ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದರು.. ಎಸ್‍ಸಿ-ಎಸ್‍ಟಿ ಇಪಿಡಬ್ಲ್ಯೂಓ ಕಾಸರಗೋಡು ಏರಿಯಾ ಕಾರ್ಯದರ್ಶಿ ಸಿ.ಕೆ ಗಣೇಶ್ ಸ್ವಾಗತಿಸಿದರು. ಏರಿಯಾ ಉಪಾಧ್ಯಕ್ಷ ವಸಂತ ಚಾಪ್ಪಾಡಿ ವಂದಿಸಿದರು.




