ಕಾಸರಗೋಡು: ಆಲ್ ಕೇರಳ ಛಾಯಾಗ್ರಾಹಕರ ಸಂಘ (ಎಕೆಪಿಎ) ಕಾಸರಗೋಡು ಪೂರ್ವ ಘಟಕದ ವತಿಯಿಂದ ಯುವ ಕೃಷಿಕ ಹಮೀದ್ ಮಣಿ ಅವರನ್ನು ಕೃಷಿ ಕ್ಷೇತ್ರದಲ್ಲಿ ತಾವು ನಡೆಸಿರುವ ಅತ್ಯುತ್ತಮ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು.
ಸಾಮಾಜಿಕ-ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಸಾಧನೆ ಜತೆಗೆ ಹಮೀದ್ ಮಣಿ ಕಳೆದ ಕೆಲವು ವರ್ಷಗಳಿಂದ ಕೃಷಿಯಲ್ಲೂ ಮುಂಚೂಣಿಯಲ್ಲಿದ್ದು, ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಗಳಿಸಿದ್ದಾರೆ.
2025 ರಲ್ಲಿ ಅತ್ಯುತ್ತಮ ಸಮಗ್ರ ಮೀನು ಸಾಕಣೆಗಾಗಿ ಬ್ಲಾಕ್ ಮಟ್ಟದ ಪ್ರಶಸ್ತಿ ಪಡೆದಿದ್ದರು. ಹಮೀದ್ ಮಣಿ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ರಾಜೇಂದ್ರನ್ ಪೆÇನ್ನದ ಸ್ಮರಣಿಕೆ ನೀಡಿ ಗೌರವಿಸಿದರು. ಕೋಶಾಧಿಕಾರಿ ಮನೀಶ್, ಉಪಾಧ್ಯಕ್ಷ ಅಖಿಲ್ ಮತ್ತು ಪಿಆರ್‍ಒ ಶ್ರೀಕಾಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಜಿತ್ ಇನ್ಫೋಕಸ್ ಸ್ವಾಗತಿಸಿದರು.





