ಮಂಜೇಶ್ವರ: ಕಾಮಗಾರಿ ಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಿಂದ ತೂಮಿನಾಡು ತನಕದ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯರಾಶಿ ಕಂಡುಬಂದಿದ್ದು, ಪ್ರಯಾಣಿಕರು ಮಾಸ್ಕ್ ಧರಿಸಿಯೇ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾನವಾಗಿದೆ. ತ್ಯಾಜ್ಯ ರಾಶಿಯಿಂದ ದುರ್ಗಂಧ ಬೀರುತ್ತಿದ್ದು, ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿಯಿದೆ.
ಕೈಕಂಬ, ಉಪ್ಪಳ ಗೇಟ್ ಪರಿಸರದಲ್ಲೂ ವ್ಯಾಪಕವಾಗಿ ತ್ಯಾಜ್ಯ ರಾಶಿ ಹರಡಿ ಬಿದ್ದಿದೆ. ಈ ದಾರಿಯಾಗಿ ಶಾಲಾ ವಿದ್ಯಾರ್ಥಿಗಳು, ನೂರಾರು ವಾಹನಗಳು, ಕಾಲ್ನಡೆ ಮೂಲಕ ಜನರು ಸಂಚರಿಸುತ್ತಿದ್ದಾರೆ. ಪ್ಲಾಸ್ಟಿಕ್, ಆಹಾರ ಪೆÇಟ್ಟಣಗಳು, ಉಪಯೋಗ ಶೂನ್ಯವಾದ ವಿವಿಧ ವಸ್ತುಗಳ ಸಹಿತ ತ್ಯಾಜ್ಯ ರಾಶಿ ಕಂಡು ಬರುತ್ತಿದೆ. ತ್ಯಾಜ್ಯ ರಾಶಿಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕೂಡಾ ವ್ಯಕ್ತವಾಗಿದೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತಿತ್ತು. ಆದರೆ ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಬಳಿಕ ಸರ್ವೀಸ್ ರಸ್ತೆಯಲ್ಲೇ ತ್ಯಾಜ್ಯ ರಾಶಿ ಕಂಡು ಬಂದಿದ್ದು, ರೋಗ ಭೀತಿ ಸೃಷ್ಟಿಸಿದೆ.
ಅಭಿಮತ:
-ತೀವ್ರ ಕಳವಳಕಾರಿಯಾಗಿರುವ ತ್ಯಾಜ್ಯ ರಾಶಿ ಗಂಭೀರ ಸಮಸ್ಯೆ ಸೃಷ್ಟಿಸುತ್ತಿದೆ. ಈ ಬಗ್ಗೆ ಹೆದ್ದಾರಿ ಹಾದು ಹೋಗುವಲ್ಲಿರುವ ಗ್ರಾ.ಪಂ.ಅಧಿಕೃತರಿಗೆ ಮಾಹಿತಿ ನೀಡಿ ಸ್ಪಷ್ಟೀಕರಣ-ಕ್ರಮಗಳಿಗೆ ಸೂಚಿಸಲಾಗಿದ್ದು, ಕಾದು ನೋಡಬೇಕಿದೆ.
-ರಹ್ಮಾನ್ ಉದ್ಯಾವರ
ಪ್ರ.ಕಾರ್ಯದರ್ಶಿ. ಗ್ರಾಹಕರ ವೇದಿಕೆ. ಮಂಜೇಶ್ವರ.




.jpg)
