ಕಾಸರಗೋಡು: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕಾಸರಗೋಡಿನ ಶ್ರೀ ಗೋಪಾಲಕೃಷ್ಣಯಕ್ಷಗಾನ ಬೊಂಬೆಯಾಟ ಸಂಘದ ಬೊಂಬೆಯಾಟ ಪ್ರದರ್ಶನ ಆಗಸ್ಟ್ 15ರಂದು ಮುಂಬಯಿ ಮಹಾನಗರದಲ್ಲಿ ಪ್ರಸ್ತುತಗೊಳ್ಳಲಿದೆ. ಮುಂಬೈನ ಕಲಾಸಾಂಸ್ಕøತಿಕಸಂಸ್ಥೆ 'ಗೋಕುಲ'ದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಘದ ಪ್ರಧಾನ ಸೂತ್ರದಾರ ಕೆ. ವಿ. ರಮೇಶರವರ ನಿರ್ದೇಶನದಲ್ಲಿ 'ನರಕಾಸುರ ವಧೆ -ಗರುಡ ಗರ್ವಭಂಗ' ಪ್ರಸಂಗಪ್ರದರ್ಶನಗೊಳ್ಳಲಿದೆ. ಸಹಸೂತ್ರದಾರರಾದ ಕೆ.ವಿ.ತಿರುಮಲೇಶ, ಕೆ.ವಿ. ಸುದರ್ಶನ, ಕುಮಾರಸ್ವಾಮಿ ಎ.,ಮನೋರಮ ಕೆ. ಎಡನೀರು, ಅನೀಶ್ ಪಿ., ಅಚಲ್ ರಾವ್‍ಮರ್ದಂಬೈಲು ಸಹಕರಿಸುವರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ತೆಂಕುತಿಟ್ಟಿನ ಏಕೈಕ ಯಕ್ಷಗಾನಬೊಂಬೆಯಾಟ ತಂಡವಾಗಿದ್ದು ನಾಲ್ಕು ದಶಕಗಳ ಇತಿಹಾಸವಿದೆ. ದೇಶ-ವಿದೇಶಗಳಲ್ಲಿ 3000ಕ್ಕೂ ಹೆಚ್ಚುಪ್ರದರ್ಶನ, ಪ್ರಾತ್ಯಕ್ಷಿಕೆ ನೀಡಿ ದಾಖಲೆ ಸೃಷ್ಟಿಸಿದ್ದು, ಹಲವಾರು ಪ್ರಶಸ್ತಿ,ಪುರಸ್ಕಾರಗಳನ್ನುಪಡೆದು ಕಲಾಜಗತ್ತಿನಲ್ಲಿ ವಿಶೇಷ ಸ್ಥಾನವನ್ನುಗಳಿಸಿಕೊಂಡಿದೆ.





